'ಸಿಜ್ಜೀಲ್' ಕ್ಷಿಪಣಿ
(ಚಿತ್ರ ಕೃಪೆ: X/@Iran_in_India)
ನವದೆಹಲಿ: ಇಸ್ರೇಲ್ ಮೇಲೆ ಪೂರ್ಣ ಪ್ರಮಾಣದ ಯುದ್ಧ ಘೋಷಿಸಿದ ಬೆನ್ನಲ್ಲೇ ಆಪರೇಷನ್ 'ಟ್ರು ಪ್ರಾಮಿಸ್ 3' ಕಾರ್ಯಾಚರಣೆಯ 12ನೇ ಅಲೆಯ ಭಾಗವಾಗಿ ಅತಿ ಭಾರದ, ದೀರ್ಘ ಶ್ರೇಣಿಯ ಎರಡು ಹಂತದ 'ಸಿಜ್ಜೀಲ್' ಕ್ಷಿಪಣಿಗಳ (Sejjil) ದಾಳಿಯನ್ನು ಪ್ರಾರಂಭಿಸಿರುವುದಾಗಿ ಇರಾನ್ ಘೋಷಿಸಿದೆ.
ಈ ಕುರಿತು ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯೂ 'ಎಕ್ಸ್'ನಲ್ಲಿ ಚಿತ್ರ ಸಮೇತ ಮಾಹಿತಿ ಹಂಚಿಕೊಂಡಿದೆ.
ಘನ ಇಂಧನ ಚಾಲಿತ ಸಿಜ್ಜೀಲ್ ಮಿಸೈಲ್ ದೀರ್ಘ ಶ್ರೇಣಿಯ ಸಾಮರ್ಥ್ಯವನ್ನು ಹೊಂದಿದೆ. ಸಿಜ್ಜೀಲ್ ಕ್ಷಿಪಣಿಗಳು ಇರಾನ್‌ನ ಅತ್ಯಂತ ನಿಖರ ಮತ್ತು ಶಕ್ತಿಶಾಲಿ ಕಾರ್ಯತಂತ್ರದ ಶಸ್ತ್ರಾಸ್ತ್ರಗಳಲ್ಲಿ ಒಂದಾಗಿದೆ ಎಂದು ಉಲ್ಲೇಖಿಸಿದೆ.
ಶತ್ರುಗಳ ಗುರಿಯನ್ನು ನಿಖರವಾಗಿ ಭೇದಿಸಿ ನಾಶಮಾಡುವ ಸಾಮರ್ಥ್ಯವನ್ನು ಹೊಂದಿದೆ. ಈ ಸಂಬಂಧ ‘ಸಿಜ್ಜೀಲ್’ ಎನ್ನುವ ಉಲ್ಲೇಖ ಇರುವ ಕುರಾನ್‌ನ ಸೂಕ್ತವನ್ನು ಹಂಚಿಕೊಂಡಿದೆ.
ಇಸ್ರೇಲ್‌ನ ಟೆಲ್ ಅವೀವ್‌ನಲ್ಲಿ ಆಸ್ಪತ್ರೆ ಮೇಲಿನ ದಾಳಿಗೆ ಸಂಬಂಧಿಸಿದಂತೆ ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸ್ಪಷ್ಟನೆ ನೀಡಿದೆ.
ಇಸ್ರೇಲ್‌ನ ಮಿಲಿಟರಿ ನೆಲೆ ಗುರಿಯಾಗಿಸಿ ದಾಳಿ ನಡೆದಿದೆ. ಈ ಗುರಿಗಳು ಮಿಲಿಟರಿ ಆಸ್ಪತ್ರೆಯ ಸಮೀಪದಲ್ಲೇ ಇರುವುದರಿಂದ ಸ್ಫೋಟದ ತೀವ್ರತೆಗೆ ಆಸ್ಪತ್ರೆಯ ಕಟ್ಟಡಕ್ಕೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.