ADVERTISEMENT

ಮರಾಠಿ ಭಾಷಿಕ ಅಭ್ಯರ್ಥಿ ವಿರುದ್ಧ ‌ಫಡ್ನವೀಸ್ ಪ್ರಚಾರ: ಶಿವಸೇನಾ, ಎನ್‌ಸಿಪಿ ಟೀಕೆ

ಬೆಳಗಾವಿಯಲ್ಲಿ ದೇವೇಂದ್ರ ಫಡ್ನವೀಸ್‌ ಪ್ರಚಾರ

ಪಿಟಿಐ
Published 16 ಏಪ್ರಿಲ್ 2021, 12:45 IST
Last Updated 16 ಏಪ್ರಿಲ್ 2021, 12:45 IST
ದೇವೇಂದ್ರ ಫಡ್ನವೀಸ್
ದೇವೇಂದ್ರ ಫಡ್ನವೀಸ್   

ಮುಂಬೈ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಮರಾಠಿ ಮಾತನಾಡುವ ಅಭ್ಯರ್ಥಿ ವಿರುದ್ಧ ಪ್ರಚಾರ ನಡೆಸಿದ ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರ ಕ್ರಮವನ್ನು ಶಿವಸೇನಾ ಮತ್ತು ಎನ್‌ಸಿಪಿ ಟೀಕಿಸಿದೆ.

ಬೆಳಗಾವಿಯಲ್ಲಿ ಮರಾಠಿ ಭಾಷಿಕ ಅಭ್ಯರ್ಥಿಯ ವಿರುದ್ಧ ಮಹಾರಾಷ್ಟ್ರದ ನಾಯಕರು ಪ್ರಚಾರ ಮಾಡಬಾರದು ಎಂದು ಶಿವಸೇನಾದ ಮುಖಂಡ ಸಂಜಯ್ ರಾವುತ್ ಹೇಳಿದ್ದಾರೆ.

‘ಈ ರೀತಿ ಪ್ರಚಾರ ಮಾಡುವ ಮೂಲಕ ಬೆಳಗಾವಿಯ ಮರಾಠಿಗರಿಗೆ ಬಿಜೆಪಿಯು ದ್ರೋಹ ಬಗೆದಿದೆ’ ಎಂದು ಎನ್‌ಸಿಪಿ ಅಧ್ಯಕ್ಷ ಹಾಗೂ ರಾಜ್ಯ ಜಲ ಸಂಪನ್ಮೂಲ ಖಾತೆ ಸಚಿವ ಜಯಂತ್ ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.