ADVERTISEMENT

ಛತ್ತೀಸಗಢ: ನಕ್ಸಲರ ಹಿರಿಯ ನಾಯಕ ಹತ

ಪಿಟಿಐ
Published 5 ಜೂನ್ 2025, 15:50 IST
Last Updated 5 ಜೂನ್ 2025, 15:50 IST
   

ಬಿಜಾಪುರ: ಛತ್ತೀಸಗ‌ಢದ ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ನಕ್ಸಲರ ಹಿರಿಯ ನಾಯಕ ಸುಧಾಕರ್‌ ಹತರಾಗಿದ್ದಾರೆ ಎಂದು ಉನ್ನತ ಮೂಲಗಳು ಗುರುವಾರ ತಿಳಿಸಿವೆ.  

ಮಾವೊಗಳ ಕೇಂದ್ರ ಸಮಿತಿ ಸದಸ್ಯ ಗೌತ‌ಮ್‌ ಅಲಿಯಾಸ್‌ ಸುಧಾಕರ್‌ ಅವರ ಪತ್ತೆಗಾಗಿ ₹40 ಲಕ್ಷ ಬಹುಮಾನ ಘೋಷಿಸಲಾಗಿತ್ತು. 

ಇತ್ತೀಚೆಗಷ್ಟೇ, ಸಿಪಿಐ (ಮಾವೋವಾದಿ) ಪಕ್ಷದ ಪ್ರಧಾನ ಕಾರ್ಯದರ್ಶಿ ನಂಬಾಲಾ ಕೇಶವ್‌ ರಾವ್‌ ಅಲಿಯಾಸ್‌ ಬಸವರಾಜು ಅವರು ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿದ್ದರು. ಅದಾದ ಕೆಲವೇ ದಿನಗಳಲ್ಲಿ ನಕ್ಸಲರ ಮತ್ತೊಬ್ಬ ಹಿರಿಯ ನಾಯಕ ಎನ್‌ಕೌಂಟರ್‌ಗೆ ಬಲಿಯಾಗಿದ್ದಾರೆ. ಆದರೆ, ಸುಧಾಕರ್‌ ಅವರ ಸಾವನ್ನು ಅಧಿಕೃತವಾಗಿ ಇಲ್ಲಿಯವರೆಗೆ ಘೋಷಿಸಲಾಗಿಲ್ಲ.  

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.