ADVERTISEMENT

ಮೋದಿ ಜನ್ಮದಿನದಂದು ದಾಖಲೆ: ಸಂಜೆ ಹೊತ್ತಿಗೆ 2 ಕೋಟಿ ಡೋಸ್ ಲಸಿಕೆ ವಿತರಣೆ

ಪಿಟಿಐ
Published 17 ಸೆಪ್ಟೆಂಬರ್ 2021, 13:11 IST
Last Updated 17 ಸೆಪ್ಟೆಂಬರ್ 2021, 13:11 IST
ಎಎಫ್‌ಪಿ ಚಿತ್ರ
ಎಎಫ್‌ಪಿ ಚಿತ್ರ   

ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಜನ್ಮದಿನವಾದ ಇಂದು ಎರಡು ಕೋಟಿ ಡೋಸ್ ಕೋವಿಡ್ -19 ಲಸಿಕೆ ನೀಡುವ ಮೂಲಕ ಭಾರತ ಹೊಸ ದಾಖಲೆ ನಿರ್ಮಿಸಿದೆ.

ಕೋ-ವಿನ್ ಪೋರ್ಟಲ್‌ನ ಮಾಹಿತಿಯ ಪ್ರಕಾರ, ಶುಕ್ರವಾರ ಸಂಜೆ 5.27ರ ಹೊತ್ತಿಗೆ ದೇಶದಲ್ಲಿ 2,03,68,343 ಲಸಿಕೆ ವಿತರಣೆ ಮಾಡಲಾಗಿದೆ.

ಈ ಮೂಲಕ ಈ ವರೆಗೆ ದೇಶದಾದ್ಯಂತ ಕೋವಿಡ್ ಲಸಿಕೆ ವಿತರಣೆ ಸಂಖ್ಯೆ 78.72 ಕೋಟಿ ಡೋಸ್ ದಾಟಿದೆ.

ADVERTISEMENT

‘ಆರೋಗ್ಯ ಕಾರ್ಯಕರ್ತರು ಮತ್ತು ದೇಶದ ಜನರ ಪರವಾಗಿ ಪ್ರಧಾನಿಗೆ ಇದು ಉಡುಗೊರೆ. ಇಂದು ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದಂದು, ಭಾರತವು ಒಂದೇ ದಿನದಲ್ಲಿ 2 ಕೋಟಿ ಲಸಿಕೆ ಡೋಸ್‌ಗಳನ್ನು ನೀಡುವ ಐತಿಹಾಸಿಕ ಹಂತ ದಾಟುವ ಮೂಲಕ ಹೊಸ ದಾಖಲೆಯನ್ನು ನಿರ್ಮಿಸಿದೆ’ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.

ದೈನಂದಿನ ಲಸಿಕೆ ವಿತರಣೆ ಸಂಖ್ಯೆ ಒಂದು ತಿಂಗಳೊಳಗೆ ನಾಲ್ಕನೇ ಬಾರಿಗೆ ಒಂದು ಕೋಟಿ ಗಡಿ ದಾಟಿದೆ.

ಇಂದು ಮಧ್ಯಾಹ್ನ 1.30ರ ವೇಳೆಗೆ ದೇಶದಲ್ಲಿ 1 ಕೋಟಿ ಡೋಸ್ ಲಸಿಕೆ ವಿತರಣೆ ಮಾಡಲಾಗಿತ್ತು. ಅದಾದ ಕೇವಲ 4 ಗಂಟೆಗಳಲ್ಲಿ ಎರಡು ಕೋಟಿಗೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.