ADVERTISEMENT

ಛತ್ತೀಸಗಡ: ಸುಣ್ಣದ ಕಲ್ಲಿನ ಗಣಿ ಕುಸಿದು 7 ಮಂದಿ ಸಾವು

ಪಿಟಿಐ
Published 2 ಡಿಸೆಂಬರ್ 2022, 12:29 IST
Last Updated 2 ಡಿಸೆಂಬರ್ 2022, 12:29 IST
ಸುಣ್ಣದ ಕಲ್ಲಿನ ಗಣಿ ಕುಸಿತ; ರಕ್ಷಣಾ ಕಾರ್ಯಾಚರಣೆ
ಸುಣ್ಣದ ಕಲ್ಲಿನ ಗಣಿ ಕುಸಿತ; ರಕ್ಷಣಾ ಕಾರ್ಯಾಚರಣೆ   

ಜಗದಲ್‌ಪುರ: ಛತ್ತೀಸಗಡದ ಬಸ್ತಾರ್ ಜಿಲ್ಲೆಯ ಮಾಲೆಗಾಂವ್ ಗ್ರಾಮದಲ್ಲಿ ಸುಣ್ಣದ ಕಲ್ಲಿನ ಗಣಿಯ ಒಂದು ಭಾಗ ಕುಸಿದು ಏಳು ಮಂದಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೃತರಲ್ಲಿ ಆರು ಮಂದಿ ಮಹಿಳೆಯರು ಸೇರಿದ್ದಾರೆ.

ಜಗದಲ್‌ಪುರದಿಂದ 12 ಕಿ.ಮೀ. ದೂರದಲ್ಲಿ ನಗರ್‌ನಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ:

ADVERTISEMENT

ಗಣಿಯಲ್ಲಿ ಮಣ್ಣು ಅಗೆಯುತ್ತಿದ್ದಾಗ ಒಂದು ಭಾಗ ಕುಸಿದಿದೆ. ಇದರಿಂದ ಕಾರ್ಮಿಕರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡರು ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ನಡೆಸಿದರು. ಐವರು ಸ್ಥಳದಲ್ಲೇ ಮೃತಪಟ್ಟರೆ ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.