ADVERTISEMENT

ಭಾರತ ಭೇಟಿಗೆ ದೆಹಲಿಗೆ ಬಂದಿಳಿದ ಸೆಶೆಲ್ಸ್‌ ಪ್ರಧಾನಿಗೆ ಮೋದಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 25 ಜೂನ್ 2018, 5:35 IST
Last Updated 25 ಜೂನ್ 2018, 5:35 IST
ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಅವರು ಸೋಮವಾರ ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಚಿತ್ರ: ಎಎನ್‌ಐ ಟ್ವೀಟ್‌
ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಅವರು ಸೋಮವಾರ ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದರು. ಚಿತ್ರ: ಎಎನ್‌ಐ ಟ್ವೀಟ್‌   

ನವದೆಹಲಿ:ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಅವರು ಸೋಮವಾರ ದೆಹಲಿಗೆ ಭೇಟಿ ನೀಡಿದ್ದು, ಈ ವೇಳೆ ರಾಷ್ಟ್ರಪತಿ ಹಾಗೂ ಪ್ರಧಾನಿ ಅವರು ಸ್ವಾಗತಿಸಿದರು.

ರಾಷ್ಟ್ರಪತಿ ಭನನಕ್ಕೆ ಬಂದ ಡ್ಯಾನಿ ಫೌರೆ ಅವರನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಆತ್ಮೀಯವಾಗಿ ಸ್ವಾಗತಿಸಿದರು.

‘ನಾನು ಶ್ರೇಷ್ಠ ರಾಷ್ಟ್ರದಲ್ಲಿದ್ದೇನೆ. ಭಾರತ ಮತ್ತು ಸೆಶೆಲ್ಸ್‌ ನಡುವಿನ ಸಂಬಂಧ ಉತ್ತಮಗೊಳ್ಳುತ್ತದೆ. ನನ್ನ ಈ ಭೇಟಿ ಉಭಯ ರಾಷ್ಟ್ರಗಳ ಸಂಬಂಧವನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲಿದೆ’ ಎಂದು ಸೆಶೆಲ್ಸ್‌ನ ಪ್ರಧಾನಿ ಡ್ಯಾನಿ ಫೌರೆ ಹೇಳಿದರು.

ADVERTISEMENT

ಬಳಿಕ, ಡ್ಯಾನಿ ಫೌರೆ ಅವರು ರಾಜ್‌ಘಾಟ್‌ಗೆ ತೆರಳಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಅವರ ಸಮಾಧಿಗೆ ಪುಷ್ಪನಮನ ಸಲ್ಲಿಸಿದರು.

ಸೆಶೆಲ್ಸ್‌ ಪೂರ್ವ ಆಫ್ರಿಕಾದಿಂದ ಹಿಂದೂ ಮಹಾಸಾಗರದ 115 ದ್ವಿಪಗಳ ಸಮೂಹ. ಇಲ್ಲಿ ಹಲವು ಕಡಲ ತೀರಗಳು ಪ್ರವಾಸಿಗರ ನೆಚ್ಚಿನ ತಾಣಗಳು. ಹವಳ ಸೇರಿದಂತೆ ಪ್ರಾಕೃತಿಕ ನಿಕ್ಷೇಪಗಳಿವೆ. ಜತೆಗೆ ಅಲ್ಡೊಬಾರ್‌ ಎಂಬ ಅಪರೂಪದ ಆಮೆಯೂ ಇಲ್ಲಿನ ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.