ADVERTISEMENT

ಕೇರಳ: ಶಬರಿಮಲೆ ನ್ಯಾಯಕ್ಕಾಗಿ ಬಿಜೆಪಿ ಹೋರಾಟ; ನಿತಿನ್ ನವೀನ್

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 8:06 IST
Last Updated 7 ಫೆಬ್ರುವರಿ 2026, 8:06 IST
<div class="paragraphs"><p>ನಿತಿನ್ ನವೀನ್</p></div>

ನಿತಿನ್ ನವೀನ್

   

ಕೊಚ್ಚಿ: ಶಬರಿಮಲೆ ವಿಷಯದಲ್ಲಿ ನ್ಯಾಯ ಒದಗಿಸುವುದಕ್ಕಾಗಿ ಬಿಜೆಪಿ ಸಂಪೂರ್ಣ ಹೋರಾಟ ನಡೆಸಲಿದೆ ಎಂದು ಬಿಜೆಪಿ ಅಧ್ಯಕ್ಷ ನಿತಿನ್ ನವೀನ್ ಶನಿವಾರ ಹೇಳಿದ್ದಾರೆ.

ಶಬರಿಮಲೆಯ ಅಯ್ಯಪ್ಪಸ್ವಾಮಿ ದೇವಸ್ಥಾನದ ಚಿನ್ನ ಕಳವು ಪ್ರಕರಣವನ್ನು ಉಲ್ಲೇಖಿಸಿ ಅವರು ಈ ಹೇಳಿಕೆ ನೀಡಿದ್ದಾರೆ.

ADVERTISEMENT

ಇಲ್ಲಿನ ಆದಿಶಂಕರ ಜನ್ಮಭೂಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಅವರು ಶೃಂಗೇರಿ ಮಠಕ್ಕೆ ಭೇಟಿ ನೀಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು. 

ಕೇರಳದ ಜನರ ಸುರಕ್ಷತೆ ಹಾಗೂ ಅಭಿವೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದ್ದೇವೆ. ಕೇರಳ ಜನರ ಜೊತೆ ನಾವಿದ್ದೇವೆ, ಜನರ ಅಹವಾಲು, ಸಮಸ್ಯೆಗಳನ್ನು ಪಕ್ಷ ಆಲಿಸಿದ್ದು ರಾಜ್ಯವನ್ನು ಅಭಿವೃದ್ಧಿಪಡಿಸುವ ಬದ್ಧತೆಯನ್ನು ಪಕ್ಷ ಹೊಂದಿದೆ ಎಂದು ನವೀನ್ ತಿಳಿಸಿದರು.

ಶಬರಿಮಲೆ ವಿಷಯದಲ್ಲಿ ಆಡಳಿತ ಪಕ್ಷಗಳು ಮತ್ತು ವಿರೋಧ ಪಕ್ಷಗಳು ಆಟವಾಡುತ್ತಿವೆ. ಈ ವಿಷಯದಲ್ಲಿ ಉಭಯ ಪಕ್ಷಗಳು ಆರೋಪಿಗಳಿಗೆ ಜಾಮೀನು ಕೊಡಿಸಲು ಮುಂದಾಗಿವೆ ಎಂದು ಅವರು ಗಂಭೀರ ಆರೋಪ ಮಾಡಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.