ADVERTISEMENT

ಶಿಮ್ಲಾದಲ್ಲಿ ಈ ಋತುವಿನ ಮೊದಲ ಹಿಮಪಾತ

​ಪ್ರಜಾವಾಣಿ ವಾರ್ತೆ
Published 13 ಜನವರಿ 2023, 6:19 IST
Last Updated 13 ಜನವರಿ 2023, 6:19 IST
ಶಿಮ್ಲಾ
ಶಿಮ್ಲಾ    

ಶಿಮ್ಲಾ: ಹಿಮಾಚಲ ಪ್ರದೇಶದ ರಾಜಧಾನಿ ಶಿಮ್ಲಾದಲ್ಲಿ ಶುಕ್ರವಾರ ಈ ಋತುವಿನ ಮೊದಲ ಹಿಮಪಾತವಾಗಿದೆ.

ಶಿಮ್ಲಾದಲ್ಲಿ ಬಹಳ ದಿನಗಳ ನಂತರ ಹಿಮಪಾತ ಬಿದ್ದಿದರಿಂದ, ಎತ್ತರದ ಬೆಟ್ಟಗಳು ಹಾಗೂ ಹತ್ತಿರದ ಪ್ರದೇಶಗಳು ಹಿಮದಿಂದ ಆವೃತವಾಗಿದೆ. ಇದರಿಂದಾಗಿ ಶಿಮ್ಲಾವನ್ನು ವೀಕ್ಷಿಸಿಸುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿ ತಿಳಿಸಿದ್ದಾರೆ.

ಶಿಮ್ಲಾದಲ್ಲಿ 1.4 ಡಿಗ್ರಿ ಸೆಲ್ಸಿಯಸ್‌, ಮನಾಲಿಯಲ್ಲಿ ಕನಿಷ್ಠ 0.4 ಹಾಗೂ ಕಂಗ್ರಾದಲ್ಲಿ 4 ಡಿಗ್ರಿ ಸೆಲ್ಸಿಯಸ್‌ ತಾಪಮಾನವನ್ನು ದಾಖಲಾಗಿದೆ.

ADVERTISEMENT

ರಾಜ್ಯ ರಾಜಧಾನಿಯಿಂದ ಸುಮಾರು 250 ಕಿಮೀ ದೂರದಲ್ಲಿರುವ ಕಲ್ಪಾ(– 2.6 )ಡಿಗ್ರಿ ಮತ್ತು ಲಾಹೌಲ್‌ನ ಕೀಲಾಂಗ್ ಮತ್ತು ಸ್ಪಿತಿ(–6.3) ಜಿಲ್ಲೆಯಲ್ಲಿ ರಾತ್ರಿ ತಾಪಮಾನವು ದಾಖಲಾಗಿದೆ. ತಗ್ಗು ಪ್ರದೇಶಗಳಾದ ಧರ್ಮಶಾಲಾ, ಪಾಲಂಪುರ್, ಸೋಲನ್, ನಹಾನ್, ಬಿಲಾಸ್‌ಪುರ್, ಉನಾ, ಹಮೀರ್‌ಪುರ ಮತ್ತು ಮಂಡಿ ಪಟ್ಟಣಗಳಲ್ಲಿ ಮಳೆಯಾಗಿದ್ದು, ತಾಪಮಾನ ಗಣನೀಯವಾಗಿ ಕಡಿಮೆಯಾಗಿದೆ.

ಶನಿವಾರದವರೆಗೆ ರಾಜ್ಯದಲ್ಲಿ ಅಲ್ಲಲ್ಲಿ ಮಳೆ ಮತ್ತು ಹಿಮ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

’ನಾವು ಮೊದಲ ಬಾರಿಗೆ ಹಿಮಪಾತಕ್ಕೆ ಸಾಕ್ಷಿಯಾಗಿದ್ದೇವೆ. ಕಳೆದ ಹಲವು ದಿನಗಳಿಂದ ನಾವು ಹಿಮಪಾತಕ್ಕಾಗಿ ಕಾಯುತ್ತಿದ್ದೆವು’ ಎಂದು ಪ್ರವಾಸಿಗರು ತಿಳಿಸಿದರು. ಇದರಿಂದ ಅಲ್ಲಿನ ಹೋಟೆಲ್ ವ್ಯಾಪಾರವು ಬಿರುಸಿನಿಂದ ಸಾಗಿದೆ.

ಭಾರತದಲ್ಲಿ ಈ ಹಿಂದೆ ಬ್ರಿಟಿಷ್ ಸರ್ಕಾರದ ಅಧಿಕಾರಿಗಳಿಗೆ ಶಿಮ್ಲಾವು ಬೇಸಿಗೆಯ ರಾಜಧಾನಿಯಾಗಿ ಕಾರ್ಯನಿರ್ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.