ADVERTISEMENT

ಮಹಾ ಸಿಎಂ ಶಿಂಧೆ, 15 ಶಾಸಕರ ಅಮಾನತು ಕೋರಿ 'ಸುಪ್ರೀಂ‘ಗೆ ಶಿವಸೇನಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜುಲೈ 2022, 7:38 IST
Last Updated 1 ಜುಲೈ 2022, 7:38 IST
   

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಮತ್ತು ಇತರ 15 ಶಾಸಕರನ್ನು ಸದನದಿಂದ ಅಮಾನತುಗೊಳಿಸುವಂತೆ ಕೋರಿ ಶಿವಸೇನಾ ಮುಖ್ಯ ಸಚೇತಕ ಸುನೀಲ್ ಪ್ರಭು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದಾರೆ.

ಅವರ ವಿರುದ್ಧದ ಅನರ್ಹತೆ ಕುರಿತು ಅರ್ಜಿಯ ಅಂತಿಮ ನಿರ್ಧಾರ ಕೈಗೊಳ್ಳುವವರೆಗೆ ಅವರನ್ನು ಅಮಾನತುಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಈ ಮಧ್ಯೆ, ಜುಲೈ 3 ಮತ್ತು 4 ರಂದು ಮಹಾರಾಷ್ಟ್ರ ವಿಧಾನಸಭೆಯ ವಿಶೇಷ ಅಧಿವೇಶನವನ್ನು ಕರೆಯಲಾಗಿದೆ. ನಾಳೆ ಸ್ಪೀಕರ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ನಡೆಯಲಿದ್ದು, ಜುಲೈ 3ರಂದು ಚುನಾವಣೆ ನಡೆಯಲಿದೆ. ಬಳಿಕ, ಜುಲೈ 4ರಂದು ವಿಶ್ವಾಸಮತ ಯಾಚನೆ ಪ್ರಕ್ರಿಯೆ ನಡೆಯಲಿದೆ ಎಂದು ಎಎನ್‌ಐ ಟ್ವೀಟ್ ಮಾಡಿದೆ.

ADVERTISEMENT

ನಿನ್ನೆ ಸಂಜೆ ಬಿಜೆಪಿ ಬೆಂಬಲದೊಂದಿಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಪ್ರಮಾಣವಚನ ಸ್ವೀಕರಿಸಿದ್ದರು. ಪಣಜಿ: ಬಾಳಾಸಾಹೇಬ್‌ ಠಾಕ್ರೆ ಅವರ ಶಿವ ಸೈನಿಕನೊಬ್ಬ ಮುಖ್ಯಮಂತ್ರಿಯಾಗಿದ್ದು ಕೇವಲ ವಿಧಾನಸಭೆಯ ನನ್ನ ಸಹವರ್ತಿಗಳಿಗೆ ಮಾತ್ರವಲ್ಲ, ಇಡೀ ಮಹಾರಾಷ್ಟ್ರಕ್ಕೆ ಸಂತಸವಾಗಿದೆ. ದೇವೇಂದ್ರ ಫಡಣವಿಸ್ ಅವರ ಮಾಸ್ಟರ್ ಸ್ಟ್ರೋಕ್ ನಾನು ಸಿಎಂ ಆಗಲು ಕಾರಣ ಎಂದು ಹೇಳಿದ್ದರು.

ಇವನ್ನೂ ಓದಿ..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.