ಪರೀಕ್ಷೆ
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು ಮತ್ತು ಕಾಶ್ಮೀರದಲ್ಲಿ ಎಂಟನೇ ತರಗತಿಯ ಶೇ 52ರಷ್ಟು ಮಕ್ಕಳಿಗೆ ಎರಡನೇ ತರಗತಿಯ ಸರಳ ಪಠ್ಯಪುಸ್ತಕಗಳನ್ನು ಓದುವ ಸಾಮರ್ಥ್ಯವಿಲ್ಲ ಎಂಬ ಸಂಗತಿಯನ್ನು ವಾರ್ಷಿಕ ಮೌಲ್ಯ ಮಾಪನ ವರದಿ ಬಹಿರಂಗಪಡಿಸಿದೆ.
2024ನೇ ಸಾಲಿನ ವಾರ್ಷಿಕ ಸ್ಥಿತಿಗತಿಯ ವರದಿಯು (ಎಎಸ್‌ಇಆರ್), ಎಂಟನೇ ತರಗತಿಯ ಶೇ 47.2 ವಿದ್ಯಾರ್ಥಿಗಳು ಮಾತ್ರ ಸರ್ಕಾರಿ ಶಾಲೆಯ ಎರಡನೇ ತರಗತಿಯ ಪಠ್ಯವನ್ನು ಓದಲು ಸಮರ್ಥರಾಗಿದ್ದಾರೆ ಎಂದು ಹೇಳಿದೆ.
ಈ ಪೈಕಿ ಶೇ 70ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಣಿತದ ಸಣ್ಣ ಲೆಕ್ಕಗಳನ್ನು ಬಿಡಿಸಲು ಪರದಾಡುತ್ತಿದ್ದಾರೆ. ಕೇವಲ ಶೇ 28 ವಿದ್ಯಾರ್ಥಿಗಳು ಮಾತ್ರ ಗಣಿತ ಲೆಕ್ಕ ಮಾಡಲು ಸಮರ್ಥರಾಗಿದ್ದಾರೆ. 2018ರಲ್ಲಿ ಶೇ 55.5 ವಿದ್ಯಾರ್ಥಿಗಳು ಎರಡನೇ ತರಗತಿಯ ಪಠ್ಯ ಓದಲು ಸಮರ್ಥರಿದ್ದರು. ಇದು 2022ರಲ್ಲಿ ಶೇ 50.2 ಮತ್ತು 2024ರಲ್ಲಿ ಶೇ 47.2ಕ್ಕೆ ಕುಸಿದಿದೆ ಎಂದು ಸಮೀಕ್ಷೆ ವರದಿ ಬೊಟ್ಟುಮಾಡಿದೆ.
ಜಮ್ಮು ಮತ್ತು ಕಾಶ್ಮೀರದಲ್ಲಿ 15–16ರ ವಯೋಮಾನದ ಬಾಲಕ, ಬಾಲಕಿಯರು ಶಾಲೆಯಿಂದ ಹೊರಗುಳಿದಿರುವುದು ಕಡಿಮೆಯಾಗಿದ್ದರೂ ಕೇಂದ್ರಾಡಳಿತ ಪ್ರದೇಶದಲ್ಲಿ ಮತ್ತಷ್ಟು ಬೆಳೆಯುತ್ತಿರುವ ಶೈಕ್ಷಣಿಕ ಬಿಕ್ಕಟ್ಟಿನ ಬಗ್ಗೆ ಈ ವರದಿಯಲ್ಲಿ ಒತ್ತಿಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.