ADVERTISEMENT

ಸಿಕ್ಕಿಂ ಪ್ರವಾಹ: ಏಳು ಯೋಧರು ಸೇರಿ 21 ಮಂದಿ ಸಾವು, ಇನ್ನೂ ಪತ್ತೆಯಾಗದ 118 ಜನ

ಪಿಟಿಐ
Published 6 ಅಕ್ಟೋಬರ್ 2023, 4:54 IST
Last Updated 6 ಅಕ್ಟೋಬರ್ 2023, 4:54 IST
<div class="paragraphs"><p>ಸಿಕ್ಕಿಂ ಪ್ರವಾಹದ ದೃಶ್ಯ</p></div>

ಸಿಕ್ಕಿಂ ಪ್ರವಾಹದ ದೃಶ್ಯ

   

-ರಾಯಿಟರ್ಸ್‌ ಚಿತ್ರ

ಗ್ಯಾಂಗ್ಟಕ್‌: ತೀಸ್ತಾ ನದಿ ಪ್ರವಾಹದಲ್ಲಿ ನಾಪತ್ತೆಯಾದವರ ಶೋಧ ಕಾರ್ಯ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಏಳು ಯೋಧರ ಮೃತದೇಹಗಳು ದೊರಕಿವೆ. ಈ ಮೂಲಕ ಶುಕ್ರವಾರ ಬೆಳಗ್ಗಿನವರೆಗೆ ಸಾವಿನ ಸಂಖ್ಯೆ 21ಕ್ಕೆ ಏರಿಕೆಯಾಗಿದೆ. ಇನ್ನೂ 118 ಜನ ಪತ್ತೆಯಾಗಿಲ್ಲ.

ADVERTISEMENT

ಸೇನೆ ಮತ್ತು ವಿಪತ್ತು ನಿರ್ವಹಣಾ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.

ನಾಪತ್ತೆಯಾಗಿದ್ದ 23 ಸೇನಾ ಸಿಬ್ಬಂದಿ ಪೈಕಿ ಏಳು ಮೃತದೇಹಗಳು ದೊರೆತಿವೆ, ಒಬ್ಬರನ್ನು ರಕ್ಷಿಸಲಾಗಿದೆ. ಇನ್ನು 15 ಮಂದಿಯನ್ನು ಪತ್ತೆ ಮಾಡಬೇಕಿದೆ ಎಂದು ಮುಖ್ಯಮಂತ್ರಿ ಪಿ.ಎಸ್‌ ತಮಂಗ್‌ ಹೇಳಿದ್ದಾರೆ.

ಲಾಚೆನ್ ಮತ್ತು ಲಾಚುಂಗ್‌ನಲ್ಲಿ ಸುಮಾರು 3 ಜನರು ಸಿಲುಕಿಕೊಂಡಿದ್ದಾರೆ. ಸೇನೆ ಮತ್ತು ವಾಯುಪಡೆಯ ಹೆಲಿಕಾಪ್ಟರ್‌ಗಳ ಮೂಲಕ ಎಲ್ಲರನ್ನೂ ಸ್ಥಳಾಂತರಿಸು ಕೆಲಸ ಮಾಡುತ್ತಿದ್ದೇವೆ ಎಂದು ಸಿಕ್ಕಿಂ ಮುಖ್ಯ ಕಾರ್ಯದರ್ಶಿ ವಿಜಯ್ ಭೂಷಣ್ ಪಾಠಕ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.