ಸಿಕ್ಕಿಂನಲ್ಲಿ ಸಂಭವಿಸಿದ ಭೂಕುಸಿತ
ಪಿಟಿಐ ಚಿತ್ರ
ಗ್ಯಾಂಗ್ಟಕ್ (ಸಿಕ್ಕಿಂ): ಭೂಕುಸಿತ ಸಂಭವಿಸಿದ ಲಾಚುಂಗ್‌ನಲ್ಲಿ ಹವಾಮಾನ ಸುಧಾರಿಸಿದ ಹಿನ್ನೆಲೆಯಲ್ಲಿ ಗುರುವಾರ ರಕ್ಷಣಾ ಕಾರ್ಯಾಚರಣೆ ಪುನರಾರಂಭವಾಗಿದ್ದು, 59 ಪ್ರವಾಸಿಗರನ್ನು ಏರ್‌ಲಿಫ್ಟ್ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾನುವಾರ ಸಂಭವಿಸಿದ ಭೂಕುಸಿತದಲ್ಲಿ 109 ಜನ ಪ್ರವಾಸಿಗರು ಸಿಲುಕಿದ್ದರು. ಸೇನಾಶಿಬಿರದ ಬಳಿ ಸಂಭವಿಸಿದ ಭೂಕುಸಿತದಲ್ಲಿ ಮೂವರು ಸಿಬ್ಬಂದಿ ಮೃತಪಟ್ಟಿದ್ದರು. ಸೇನಾ ಪಡೆ ನಿರಂತರ ರಕ್ಷಣಾ ಕಾರ್ಯಾಚರಣೆ ನಡೆಸಿತ್ತು.
ಎರಡು MI-17V5 ಹೆಲಿಕಾಪ್ಟರ್ ಮೂಲಕ ಪ್ರವಾಸಿಗರನ್ನು ಏರ್‌ಲಿಫ್ಟ್ ಮಾಡಲಾಗಿದ್ದು, ಗ್ಯಾಂಗ್ಟಕ್‌ನ ಪಾಕ್ಯಾಂಗ್ ವಿಮಾನ ನಿಲ್ದಾಣಕ್ಕೆ ಕರೆತರಲಾಗಿದೆ. ಒಂದು ಹೆಲಿಕಾಪ್ಟರ್‌ನಲ್ಲಿ 39 ಮತ್ತು ಇನ್ನೊಂದರಲ್ಲಿ 20 ಪ್ರವಾಸಿಗರನ್ನು ಕರೆತರಲಾಗಿದೆ. ಪ್ರವಾಸಿಗರಲ್ಲಿ ಇಬ್ಬರು ವಿದೇಶಿ ಪ್ರಜೆಗಳಿದ್ದಾರೆ
ಮರಳಿ ಕರೆತರಲಾದ ಪ್ರವಾಸಿಗರಿಗೆ ಉಳಿದುಕೊಳ್ಳಲು ಹೊಟೆಲ್ ಮತ್ತು ಸೇನಾ ಶಿಬಿರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಜತೆಗೆ ಪ್ರವಾಸಿಗರು ತಮ್ಮ ಊರುಗಳಿಗೆ ತೆರಳು ಬಸ್ ಮತ್ತು ಹೆಲಿಕಾಪ್ಟರ್ ನಿಯೋಜಿಸಲಾಗಿದೆ. ಮೂರು ದಿನಗಳಿಂದ 1,678 ಪ್ರವಾಸಿಗರನ್ನು ರಕ್ಷಿಸಲಾಗಿದೆ ಎಂದೂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.