ADVERTISEMENT

ಸಿಕ್ಕಿಂನಲ್ಲಿ ಭಾರಿ ಮಳೆ, ಭೂಕುಸಿತ: ಸಂಕಷ್ಟದಲ್ಲಿ 1,500 ಪ್ರವಾಸಿಗರು

8 ಮಂದಿ ನಾಪತ್ತೆ

​ಪ್ರಜಾವಾಣಿ ವಾರ್ತೆ
Published 1 ಜೂನ್ 2025, 4:25 IST
Last Updated 1 ಜೂನ್ 2025, 4:25 IST
<div class="paragraphs"><p>ಸಿಕ್ಕಿಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ</p></div>

ಸಿಕ್ಕಿಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆ

   

ಪಿಟಿಐ ಚಿತ್ರ

ಗ್ಯಾಂಗ್ಟಕ್‌: ಸಿಕ್ಕಿಂನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ, ಭೂಕುಸಿತ ಸಂಭವಿಸಿದ್ದು ಹಲವೆಡೆ ಸಾರಿಗೆ ಸಂಪರ್ಕ ಕಡಿತಗೊಂಡಿದೆ. ಇದರಿಂದಾಗಿ, ಸುಮಾರು 1,500 ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಪ್ರವಾಸಿಗರಿದ್ದ ವಾಹನವೊಂದು ಮಂಗನ್‌ ಜಿಲ್ಲೆಯಲ್ಲಿ 1,000 ಅಡಿ ಎತ್ತರದಿಂದ ತೀಸ್ತಾ ನದಿಗೆ ಗುರುವಾರ ರಾತ್ರಿ ಉರುಳಿಬಿದ್ದಿತ್ತು. ಲಾಚೆನ್-ಲಾಚುಂಗ್ ಹೆದ್ದಾರಿಯ ಮುನ್ಸಿಥಾಂಗ್‌ ಸಮೀಪ ಸಂಭವಿಸಿದ ಈ ದುರಂತದ ವೇಳೆ ವ್ಯಕ್ತಿಯೊಬ್ಬರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದಾರೆ. ಎಂಟು ಮಂದಿ ನಾಪತ್ತೆಯಾಗಿದ್ದಾರೆ.

ನಾಪತ್ತೆಯಾಗಿರುವ ಎಂಟು ಪ್ರವಾಸಿಗರ ಹುಡುಕಾಟಕ್ಕೂ ಮಳೆ ಅಡ್ಡಿಪಡಿಸಿದೆ. ತೀಸ್ತಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿರುವುದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದಿದ್ದಾರೆ.

ಹಲವೆಡೆ ಭೂಕುಸಿತ ಸಂಭವಿಸಿರುವ ಕಾರಣ, ಈ ಪ್ರದೇಶಗಳಲ್ಲಿ ಸಂಚಾರ ಸ್ಥಗಿತಗೊಂಡಿದೆ. ಲಾಚೆನ್‌ನಲ್ಲಿ 115 ಮಂದಿ ಮತ್ತು ಲಾಚುಂಗ್‌ನಲ್ಲಿ ಸುಮಾರು 1,350 ಪ್ರವಾಸಿಗರು ಸಿಲುಕಿಕೊಂಡಿದ್ದಾರೆ. ಪ್ರವಾಸಿಗರಿಗೆ ತಾವು ಉಳಿದುಕೊಂಡಿರುವ ಹೋಟೆಲ್‌ಗಳಲ್ಲೇ ಇರುವಂತೆ ಸೂಚಿಸಲಾಗಿದೆ ಎಂದು ಮಂಗನ್‌ ಎಸ್‌ಪಿ ಸೋನಮ್ ಡೆಚು ಭುಟಿಯಾ ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.