ಎ.ಐ. ಚಿತ್ರ
ಗ್ಯಾಂಗ್ಟಾಕ್: ಕರ್ನಾಟಕದಲ್ಲಿ ಪದವಿ ಪೂರ್ಣಗೊಂಡ ನಿರುದ್ಯೋಗಿ ಯುವಕರಿಗೆ ‘ಯುವ ನಿಧಿ’ ಅಡಿಯಲ್ಲಿ ಮಾಸಿಕ ₹ 3 ಸಾವಿರ ನೀಡಲಾತ್ತಿದೆ. ಇದೀಗ ಇಂತಹದೆ ಯೋಜನೆಯೊಂದನ್ನು ಸಿಕ್ಕಿಂ ಸರ್ಕಾರ ಕೂಡ ಆರಂಭಿಸಿದೆ.
ನಿರುದ್ಯೋಗಿ ತಾಯಂದಿರಿಗೆ ಆರ್ಥಿಕ ಭದ್ರತೆ ಒದಗಿಸುವ ದೃಷ್ಟಿಯಿಂದ ‘ಆಮ ಸಶಕ್ತಿಕರಣ್ ಯೋಜನೆ’ಯನ್ನು ಸಿಕ್ಕಿಂ ಸರ್ಕಾರ ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ನಿರುದ್ಯೋಗಿ ತಾಯಂದಿರಿಗೆ ವಾರ್ಷಿಕ ₹ 40 ಸಾವಿರ ನೀಡಲಾಗುತ್ತದೆ.
ಭಾನುವಾರ ಸಿಕ್ಕಿಂನ ಮುಖ್ಯಮಂತ್ರಿ ಪ್ರೇಮ್ ಸಿಂಗ್ ತಮಾಂಗ್ ಅವರು 32 ಸಾವಿರ ನಿರುದ್ಯೋಗಿ ಮಹಿಳೆಯರಿಗೆ ತಲಾ ₹20 ಸಾವಿರ ಮೊತ್ತದ ಚೆಕ್ ವಿತರಣೆ ಮಾಡಿದ್ದಾರೆ.
ಸಿಕ್ಕಿಂನಲ್ಲಿ ಫಲವತ್ತತೆ ದರ ಕುಸಿಯುತ್ತಿರುವ ಕಾರಣ, ಅಲ್ಲಿನ ಜನರು ಹೆಚ್ಚು ಮಕ್ಕಳು ಮಾಡಿಕೊಳ್ಳಲು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರವು ಹಲವು ಯೋಜನೆಗಳನ್ನು ಜಾರಿಗೊಳಿಸಿದೆ.
ಭ್ರಷ್ಟಾಚಾರ ಆರೋಪದಲ್ಲಿ ಜೈಲು ಪಾಲಾಗಿದ್ದ ಸಿಕ್ಕಿಂ ಮುಖ್ಯಮಂತ್ರಿ ಪ್ರೇಮ್ ಸಿಂಗ್ ಅವರು ಜೈಲಿನಿಂದ ಬಿಡುಗಡೆಯಾದ ದಿನವಾದ ಆಗಸ್ಟ್ 10 ಅನ್ನು ‘ಆಮ ಸನ್ಮಾನ್ ದಿವಸ್’ ಎಂದು ಆಚರಣೆ ಮಾಡಲು ಸಿಕ್ಕಿಂ ಸರ್ಕಾರ ನಿರ್ಧರಿಸಿದೆ. 8 ವರ್ಷಗಳ ಹಿಂದೆ ಅವರು ಜೈಲಿನಿಂದ ಬಿಡುಗಡೆಯಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.