ADVERTISEMENT

ಪಂಜಾಬ್‌‌-ಸಿಧು, ಸಿಎಂ ನಡುವೆ ಮುಂದುವರಿದ ಮುಸುಕಿನ ಗುದ್ದಾಟ

ಸಿಧು ಬಳಿ ಇದ್ದ ಒಂದು ಖಾತೆ ಹಿಂತೆಗೆದುಕೊಂಡ ಕ್ಯಾಪ್ಟನ್

​ಪ್ರಜಾವಾಣಿ ವಾರ್ತೆ
Published 6 ಜೂನ್ 2019, 12:44 IST
Last Updated 6 ಜೂನ್ 2019, 12:44 IST
   

ಪಂಜಾಬ್‌ : ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಹಾಗೂ ಸಚಿವ ನವಜೋತ್ ಸಿಂಗ್ ಸಿಧು ನಡುವಿನಮುಸುಕಿನ ಗುದ್ದಾಟ ಮುಂದುವರಿದಿದ್ದು, ಗುರುವಾರಪೌರಾಡಳಿತ ಖಾತೆಯನ್ನು ಹಿಂತೆಗೆದು ಮೂಲಕ ಸಿಧುಗೆ ಕ್ಯಾಪ್ಟನ್ ತಿರುಗೇಟು ನೀಡಿದ್ದಾರೆ.

ಈ ಸಂಬಂಧ ರಾಜ್ಯಪಾಲರಿಗೆ ಗುರುವಾರವೇಕ್ಯಾಪ್ಟನ್ ಸೂಚಿಸಿದ್ದು, ಈ ಖಾತೆಯನ್ನು ತಾವೇ ನೋಡಿಕೊಳ್ಳುವುದಾಗಿಯೂ ತಿಳಿಸಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ನಿರೀಕ್ಷಿಸಿದಷ್ಟು ಸಾಧನೆ ಮಾಡದೆ ಕಳಪೆ ಸಾಧನೆ ಮಾಡಿದೆಎಂಬ ಕಾರಣ ನೀಡಿ ಈ ಖಾತೆಯನ್ನು ಸಿಧು ಅವರಿಂದ ಹಿಂತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ.

ಈ ಸಂಬಂಧ ಮಾಧ್ಯಮದವರೊಂದಿಗೆ ಮಾತನಾಡಿದ ಸಿಧು, ನಾನು ಇದನ್ನುಲಘುವಾಗಿ ಪರಿಗಣಿಸುವುದಿಲ್ಲ. ಪಂಜಾಬ್ ಜನತೆಗೆ ಉತ್ತರಿಸುವುದು ನನ್ನ ಜವಾಬ್ದಾರಿಯಾಗಿದೆ ಎಂದಿದ್ದಾರೆ.ಪೌರಾಡಳಿತ ಖಾತೆಯನ್ನು ಹಿಂಪಡೆದಿದ್ದರೂ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಗೆ ಸಿಧು ಅವರೇ ಸಚಿವರಾಗಿದ್ದು,ಸಂಪುಟ ದರ್ಜೆಯ ಸಚಿವರಾಗಿ ಮುಂದುವರಿದಿದ್ದಾರೆ.

ADVERTISEMENT

ಕ್ಯಾಪ್ಟನ್ ಸಿಂಗ್ ಅವರ ಈ ನಿರ್ಧಾರದಿಂದಾಗಿ ಸಿಧು ಅವರಿಗೆ ಕ್ಯಾಪ್ಟನ್ 'ನೀ ಏನೆ ಆಟವಾಡಿದರೂ ನಾನೆ ಬಾಸ್' ಎಂಬಸಂದೇಶವನ್ನು ಸೂಕ್ಷ್ಮವಾಗಿ ಮುಟ್ಟಿಸಿದ್ದಾರೆ. ಅಲ್ಲದೆ, ಈ ನಿರ್ಧಾರಕ್ಕೆ ಕಳೆದ ಲೋಕಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ನಗರ ಪ್ರದೇಶಗಳಲ್ಲಿ ಕಳಪೆ ಸಾಧನೆ ಮಾಡಿರುವ ಕಾರಣವನ್ನೂ ನೀಡಿರುವುದುಸಿಧುಗೆ ಮರು ಮಾತನಾಡಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಕಳಪೆ ಸಾಧನೆ ಕಾರಣಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕಾ ಗಾಂಧಿ ಅವರಿಗೆನಿಕಟವರ್ತಿಯಾಗಿರುವ ಸಿಧು ಅವರನ್ನು ಇಬ್ಬರಿಂದಲೂ ದೂರ ಇಡುವ ಯೋಜನೆಯಾಗಿದೆಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.