
ಸಾವು (ಪ್ರಾತಿನಿಧಿಕ ಚಿತ್ರ)
ಪೂರ್ವ ಚಂಪಾರಣ್ (ಬಿಹಾರ): ಇಲ್ಲಿನ ದೊಡ್ಡ ನೀರಿನ ಗುಂಡಿಯಲ್ಲಿ ಸ್ನಾನ ಮಾಡಲು ಹೋಗಿದ್ದ ಆರು ಮಕ್ಕಳು ಮುಳುಗಿ ಮೃತಪಟ್ಟ ಘಟನೆ ನಡೆದಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.
ಜಿಲ್ಲೆಯ ಕೇಸರಿಯಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಂಗಳವಾರ ಸಂಜೆ ಈ ದುರ್ಘಟನೆ ನಡೆದಿದೆ. ಮೃತರನ್ನು ದೀಕ್ಷಾ ಕುಮಾರಿ (12), ಸೋನಾಕ್ಷಿ ಕುಮಾರಿ (9), ಪ್ರಿಯಾ ಕುಮಾರಿ (7), ಆರಾಧ್ಯಾ ಕುಮಾರಿ (11), ಛೋಟಿ ಕುಮಾರಿ (8) ಮತ್ತು ಪ್ರಿನ್ಸ್ ಕುಮಾರ್ (11) ಎಂದು ಗುರುತಿಸಲಾಗಿದೆ.
ಬಾಲಕಿಯೊಬ್ಬಳ್ಳು ಸ್ನಾನ ಮಾಡಲು ನೀರಿನ ಗುಂಡಿಗೆ ಇಳಿದಾಗ ಕಾಲು ಜಾರಿ ಮುಳುಗಿದ್ದಾಳೆ. ಅವಳನ್ನು ರಕ್ಷಿಸಲು ಉಳಿದವರು ನೀರಿಗೆ ಜಿಗಿದ್ದು ಅವರೂ ಸಹ ಮೃತಪಟ್ಟಿದ್ದಾರೆ. ಯಾರಿಗೂ ಈಜು ಬರುತ್ತಿರಲಿಲ್ಲ ಎಂದು ಗ್ರಾಮಸ್ಥರು ಹೇಳಿದ್ದಾರೆ.
ಘಟನೆ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸ್ ಅಧಿಕಾರಿಗಳು ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನಂತರ ಪೋಷಕರಿಗೆ ಮೃತದೇಹಗಳನ್ನು ಒಪ್ಪಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.