ADVERTISEMENT

ಕರ್ನೂಲ್‌: ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಆರು ಮಂದಿ ಸಾವು

ಏಜೆನ್ಸೀಸ್
Published 17 ಅಕ್ಟೋಬರ್ 2018, 6:46 IST
Last Updated 17 ಅಕ್ಟೋಬರ್ 2018, 6:46 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಂಧ್ರ ಪ್ರದೇಶ: ರಸ್ತೆಯಲ್ಲಿ ನಿಲ್ಲಿಸಿದ್ದ ಟಾಟಾ ಏಸ್‌ ವಾಹನಕ್ಕೆ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಒಂದೇ ಕುಟುಂಬದ ಆರು ಮಂದಿ ಮೃತಪಟ್ಟಿದ್ದಾರೆ. ಜತೆಗೆ, ಇತರೆ 15 ಮಂದಿ ತೀವ್ರವಾಗಿ ಗಾಯಗೊಂಡಿರುವ ಘಟನೆ ಕರ್ನೂಲ್‌ ಜಿಲ್ಲೆಯ ಪೆದ್ದಹೋಥೂರ್‌ ಬಳಿ ನಡೆದಿದೆ.

ಮೃತರನ್ನು ಖಾಜಾ (24), ಫಾತಿಮಾ(26), ಹುಸೇನ್(23), ಅಸೀಫ್‌(17), ಅಸ್ರಾರ್‌(9), ಮಾಹೆಕ್‌ (7) ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರಗೆ ದಾಖಲಿಸಲಾಗಿದೆ.

ಪ್ರಾಥಮಿಕ ಮೂಲಗಳ ಪ್ರಕಾರ, ‘ಒಂದೇ ಕುಟುಂಬದ 21 ಮಂದಿ, ಕರ್ನೂಲ್‌ನಿಂದ ಅದೋನಿ ಬಳಿಯ ಎಲ್ಲರ್ತಿ ದರ್ಗಾಕ್ಕೆ ತೆರಳುತ್ತಿದ್ದರು’ ಎಂದು ಹೇಳಲಾಗಿದೆ.

ADVERTISEMENT

ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.