ADVERTISEMENT

20 ರಾಜ್ಯಗಳಲ್ಲಿ ಪಾದಯಾತ್ರೆ, ಟ್ರ್ಯಾಕ್ಟರ್ ರ್‍ಯಾಲಿ: ಸಂಯುಕ್ತ ಕಿಸಾನ್ ಮೋರ್ಚಾ

ಪಿಟಿಐ
Published 25 ಜನವರಿ 2023, 16:19 IST
Last Updated 25 ಜನವರಿ 2023, 16:19 IST
   

ನವದೆಹಲಿ: ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ನಡೆದ ಪ್ರತಿಭಟನೆ ವೇಲೆ ಮೃತಪಟ್ಟ ರೈತರಿಗೆ ಶ್ರದ್ಧಾಂಜಲಿ ಸಲ್ಲಿಸುವ ದೃಷ್ಟಿಯಿಂದ ಶುಕ್ರವಾರ 74ನೇ ಗಣರಾಜ್ಯೋತ್ಸವ ದಿನದಂದು ದೇಶದ 20 ರಾಜ್ಯಗಳಲ್ಲಿ ಪಾದಯಾತ್ರೆ ಮತ್ತು ಟ್ರ್ಯಾಕ್ಟರ್ ರ್‍ಯಾಲಿ ನಡೆಸಲು ಸಂಯುಕ್ತ ಕಿಸಾನ್ ಮೋರ್ಚಾ(ಎಸ್‌ಕೆಎಂ) ನಿರ್ಧರಿಸಿದೆ.

‘ಸಂಯುಕ್ತ ಕಿಸಾನ್ ಮೋರ್ಚಾ ಕರೆ ಹಿನ್ನೆಲೆಯಲ್ಲಿ ದೇಶದಾದ್ಗಂತ ನಾಳೆ ಮತ್ತೆ ಸಮಾವೆಶಗೊಳ್ಳಲಿರುವ ರೈತರು, ಗಣರಾಜ್ಯೋತ್ಸವದ ಆಚರಣೆಯೆಲ್ಲಿ ಭಾಗವಹಿಸಲಿದ್ದಾರೆ. ಧ್ವಜಾರೋಹಣದ ಬಳಿಕ ಪಾದಯಾತ್ರೆ ಮತ್ತು ಟ್ರ್ಯಾಕ್ಟರ್‌ ರ್‍ಯಾಲಿಗಳು ನಡೆಯಲಿವೆ’ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

20 ರಾಜ್ಯಗಳ 300 ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಯಲಿದ್ದು, ಕೃಷಿ ಕಾಯ್ದೆಗಳನ್ನು ಹಿಂಪಡೆಯಲು ಒತ್ತಾಯಿಸಿ ನಡೆದ ಐತಿಹಾಸಿಕ ಪ್ರತಿಭಟನೆ ಸಂದರ್ಭ ಹುತಾತ್ಮರಾದ ರೈತರಿಗೆ ಗೌರವ ಸಲ್ಲಿಸಲಾಗುತ್ತದೆ.

ಇದೇವೇಳೆ, ನಾಳೆ ಹರಿಯಾಣದ ಜಿಂದ್‌ನಲ್ಲಿ ಮಹಾ ಪಂಚಾಯತ್‌ ನಡೆಯಲಿದ್ದು, ರೈತ ಸಂಘಟನೆಯಲ್ಲಿ ಒಡಕು ಮೂಡಿಸಲು ಸರ್ಕಾರದ ಯತ್ನವನ್ನು ಬಯಲು ಮಾಡಲಾಗುತ್ತದೆ ಎಂದು ಅದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.