ADVERTISEMENT

ರೈತರ ಪ್ರತಿಭಟನೆ: ಮಾತುಕತೆಗೆ ಬರಲು ಎಸ್‌ಕೆಎಂ ನಕಾರ

ಪಿಟಿಐ
Published 1 ಜನವರಿ 2025, 15:50 IST
Last Updated 1 ಜನವರಿ 2025, 15:50 IST
<div class="paragraphs"><p>ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ –ಪಿಟಿಐ ಚಿತ್ರ</p></div>

ಶಂಭು ಗಡಿಯಲ್ಲಿ ರೈತರ ಪ್ರತಿಭಟನೆಯ ಸಾಂದರ್ಭಿಕ ಚಿತ್ರ –ಪಿಟಿಐ ಚಿತ್ರ

   

ಚಂಡೀಗಢ: ರೈತರ ಸಮಸ್ಯೆಗಳ ಬಗ್ಗೆ ಚರ್ಚಿಸಲು ಸುಪ್ರೀಂ ಕೋರ್ಟ್‌ ರಚಿಸಿರುವ ಉನ್ನತಾಧಿಕಾರ ಸಮಿತಿಯು ಗುರುವಾರ ಆಯೋಜಿಸಿರುವ ಸಭೆಗೆ ಹಾಜರಾಗಲು ತನ್ನಿಂದ ಆಗುತ್ತಿಲ್ಲ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಬುಧವಾರ ಹೇಳಿದೆ.

ಉನ್ನತಾಧಿಕಾರ ಸಮಿತಿಯು ತನಗೆ ಮಾತುಕತೆಗೆ ಬರುವಂತೆ ಆಹ್ವಾನ ನೀಡಿದೆ ಎಂದು ಎಸ್‌ಕೆಎಂ ಹೇಳಿದೆ. ಆದರೆ, ಶಂಭು ಮತ್ತು ಖಾನೌರಿ ಗಡಿಯಲ್ಲಿನ ಪ್ರತಿಭಟನೆಯಲ್ಲಿ ತಾನು ಭಾಗಿಯಲ್ಲ ಎಂದು ಎಸ್‌ಕೆಎಂ ಹೇಳಿದೆ.

ADVERTISEMENT

ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (ಕೆಎಂಎಂ) ಅಡಿಯಲ್ಲಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಕಳೆದ ವರ್ಷದ ಫೆಬ್ರುವರಿ 13ರಿಂದಲೂ ಅವರು ಶಂಭು ಮತ್ತು ಖಾನೌರಿ ಗಡಿಯಲ್ಲಿ ಬೀಡು ಬಿಟ್ಟಿದ್ದಾರೆ.

‘ಎಸ್‌ಕೆಎಂ ತಾತ್ವಿಕವಾಗಿ ಕೋರ್ಟ್‌ ಮಧ್ಯಪ್ರವೇಶವನ್ನು ಒಪ್ಪುವುದಿಲ್ಲ. ಏಕೆಂದರೆ ರೈತರು ನೀತಿಗಳಿಗೆ ಸಂಬಂಧಿಸಿದ ವಿಚಾರವಾಗಿ ಕೇಂದ್ರದ ವಿರುದ್ಧ ಹೋರಾಟ ನಡೆಸಿದ್ದಾರೆ. ಹೀಗಾಗಿ ಕೋರ್ಟ್‌ಗೆ ಇಲ್ಲಿ ಪಾತ್ರ ಇಲ್ಲ’ ಎಂದು ಹೇಳಿಕೆಯಲ್ಲಿ ಎಸ್‌ಕೆಎಂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.