ADVERTISEMENT

ಮಿಜೋರಾಂ: ಕಳ್ಳಸಾಗಣೆ ಮಾಡುತ್ತಿದ್ದ ₹8 ಕೋಟಿ ಮೌಲ್ಯದ ವಿದೇಶಿ ಸಿಗರೇಟ್, ಅಡಿಕೆ ವಶ

ಪಿಟಿಐ
Published 20 ಡಿಸೆಂಬರ್ 2024, 5:57 IST
Last Updated 20 ಡಿಸೆಂಬರ್ 2024, 5:57 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಐಜ್ವಾಲ್: ಮಿಜೋರಾಂನ ಚಂಫೈ ಮತ್ತು ಲಾಂಗ್ಟ್ಲೈ ಜಿಲ್ಲೆಗಳ ಭಾರತ ಮತ್ತು ಮ್ಯಾನ್ಮಾರ್ ಗಡಿಯ ಬಳಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ₹8 ಕೋಟಿಗೂ ಹೆಚ್ಚು ಮೌಲ್ಯದ ವಿದೇಶಿ ಸಿಗರೇಟ್‌ ಮತ್ತು ಅಡಿಕೆಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬುಧವಾರ ಲಾಂಗ್ಟ್ಲೈ ಜಿಲ್ಲೆಯ ಚೆರ್ಹ್ಲುನ್ ಪ್ರದೇಶದಲ್ಲಿ ಮಿಜೋರಾಂ ಪೊಲೀಸರ ನೆರವಿನೊಂದಿಗೆ ಅರೆಸೇನಾ ಪಡೆ ನಡೆಸಿದ ಕಾರ್ಯಾಚರಣೆಯಲ್ಲಿ ಮ್ಯಾನ್ಮಾರ್‌ನಿಂದ ಅಕ್ರಮವಾಗಿ ಸಾಗಿಸಲಾಗಿದ್ದ 600 ವಿದೇಶಿ ಸಿಗರೇಟ್‌ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ADVERTISEMENT

ವಶಪಡಿಸಿಕೊಂಡಿರುವ ₹7.8 ಕೋಟಿ ಮೌಲ್ಯದ ಸಿಗರೇಟ್‌ಗಳನ್ನು ಅದೇ ದಿನ ನೆರೆಯ ಹ್ನಾಥಿಯಲ್‌ ಜಿಲ್ಲೆಯ ಥಿಂಗ್ಸೈ ಗ್ರಾಮದಲ್ಲಿ ರಾಜ್ಯ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಮತ್ತೊಂದು ಕಾರ್ಯಾಚರಣೆಯಲ್ಲಿ, ಚಂಫೈ ಜಿಲ್ಲೆಯ ಹ್ಮುಹ್ಮೆಲ್ತಾದಲ್ಲಿ ಅಸ್ಸಾಂ ರೈಫಲ್ಸ್ ಮತ್ತು ಕಸ್ಟಮ್ಸ್ ಅಧಿಕಾರಿಗಳ ಜಂಟಿ ತಂಡವು ಕಳ್ಳಸಾಗಣೆ ಮಾಡುತ್ತಿದ್ದ 4,400 ಕೆ.ಜಿ ಅಡಿಕೆಯನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿ ತಿಳಿಸಿದ್ದಾರೆ.

₹30.8 ಲಕ್ಷ ಮೌಲ್ಯದ ಸರಕುಗಳನ್ನು ಕಸ್ಟಮ್ಸ್‌ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.