ADVERTISEMENT

ಭಾರತೀಯ ಸಮಾಜದಲ್ಲಿ ಅಂತರ್ಗತವಾಗಿರುವ ಸಾಮರಸ್ಯ: ಮೋಹನ್‌ ಭಾಗವತ್

ಪಿಟಿಐ
Published 3 ಜನವರಿ 2026, 16:00 IST
Last Updated 3 ಜನವರಿ 2026, 16:00 IST
   

ಭೋಪಾಲ್‌: ‘ಸಾಮಾಜಿಕ ಸಾಮರಸ್ಯವು ಭಾರತದಲ್ಲಿ ಅಂತರ್ಗತವಾಗಿದ್ದು, ಅದನ್ನು ಬಲಪಡಿಸಲು ನಿರಂತರ ಸಂವಾದ ಹಾಗೂ ಸಾಮೂಹಿಕ ಪ್ರಯತ್ನದ ಅಗತ್ಯವಿದೆ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್‌)  ಸರಸಂಘಚಾಲಕ ಮೋಹನ್‌ ಭಾಗವತ್ ತಿಳಿಸಿದ್ದಾರೆ.

ಭೋಪಾಲ್‌ನ ಕುಶಭಾವು ಠಾಕ್ರೆ ಆಡಿಟೋರಿಯಂನಲ್ಲಿ ಶನಿವಾರ ನಡೆದ ‘ಸಾಮಾಜಿಕ ಸಾಮರಸ್ಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ಸಾವಿರಾರು ವರ್ಷಗಳಿಂದ ದೇಶದ ಜನರು ಒಂದೇ ಡಿಎನ್‌ಎ ಹಂಚಿಕೊಂಡು ಬದುಕುತ್ತಿದ್ದರೂ ಕೂಡ ಬುಡಕಟ್ಟು ಹಾಗೂ ಇತರೆ ಸಮುದಾಯಗಳಲ್ಲಿ ಗೊಂದಲ ಮೂಡಿಸುವ ಮೂಲಕ ವಿಭಜಿಸುವ ಯತ್ನಗಳು ನಡೆದವು. ದುರ್ಬಲ ವರ್ಗದವರ ಜೊತೆಗೆ ನಿರಂತರ ಸಂವಾದ ಹಾಗೂ ಪರಸ್ಪರ ತಿಳಿವಳಿಕೆಯ ಮೂಲಕ ಬೆಂಬಲಿಸುವ ಕೆಲಸವಾಗಬೇಕಿದೆ’ ಎಂದು ಅವರು ತಿಳಿಸಿದ್ದಾರೆ.

ADVERTISEMENT

‘ಕಾನೂನುಗಳನ್ನು ಸಮಾಜವನ್ನು ನಿಯಂತ್ರಿಸುತ್ತವೆ ಎಂಬುದು ನಿಜವಾದರೂ ಕೂಡ ಸದ್ಬಾವನೆಯಿಂದ ಒಬ್ಬರನ್ನು ಮತ್ತೊಬ್ಬರನ್ನು ಬೆಸೆಯಲು ಸಾಧ್ಯ. ವೈವಿಧ್ಯತೆಯಲ್ಲಿ ಏಕತೆಯೇ ದೇಶದ ಅಸ್ಮಿತೆಯಾಗಿದ್ದು, ಸಾಮಾಜಿಕ ಸಾಮರಸ್ಯವೂ ಕೂಡ ದೇಶದಲ್ಲಿ ಅಂತರ್ಗತವಾಗಿ ಸೇರಿಕೊಂಡಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.