ADVERTISEMENT

ಕೆಲವರು ನಾಚಿಕೆಯಿಲ್ಲದೆ ತಾಲಿಬಾನ್‌ಗೆ ಬೆಂಬಲ ನೀಡುತ್ತಿದ್ದಾರೆ: ಯೋಗಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಆಗಸ್ಟ್ 2021, 10:51 IST
Last Updated 19 ಆಗಸ್ಟ್ 2021, 10:51 IST
ಯೋಗಿ ಆದಿತ್ಯನಾಥ
ಯೋಗಿ ಆದಿತ್ಯನಾಥ   

ಲಖನೌ: ತಾಲಿಬಾನ್‌ನಂತಹ ಉಗ್ರ ಸಂಘಟನೆಗಳಿಗೆ ದೇಶದ ಕೆಲವರು ಬೆಂಬಲ ನೀಡುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದುಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಟೀಕಿಸಿದ್ದಾರೆ.

ರಾಜ್ಯ ವಿಧಾನಸಭೆಯಲ್ಲಿ ನಡೆಯುತ್ತಿರುವ ಮುಂಗಾರು ಅಧಿವೇಶನದ ಮೂರನೇ ದಿನ ಮಾತನಾಡಿದ ಯೋಗಿ, ʼಕೆಲವರು ತಾಲಿಬಾನ್‌ ಅನ್ನು ಬೆಂಬಲಿಸುತ್ತಿದ್ದಾರೆ. ಅಲ್ಲಿ ಮಹಿಳೆಯರು ಮತ್ತು ಮಕ್ಕಳ ಮೇಲೆಎಂಥಾಕ್ರೌರ್ಯವೆಸಗಲಾಗಿದೆ? ಆದರೆ, ಕೆಲವರು ನಾಚಿಗೆಯಿಲ್ಲದೆ ತಾಲಿಬಾನ್‌ಗೆ ಬೆಂಬಲ ನೀಡುತ್ತಿದ್ದಾರೆ. ಈ ಎಲ್ಲಾ ಮುಖಗಳು ಬಯಲಾಗಬೇಕುʼ ಎಂದು ಹೇಳಿದ್ದಾರೆ.

ಅಫ್ಗಾನಿಸ್ತಾನವನ್ನು ವಶಕ್ಕೆ ಪಡೆಯಲು ತಾಲಿಬಾನ್‌ ನಡೆಸುತ್ತಿರುವ ಸಂಘರ್ಷವನ್ನುʼಸ್ವಾತಂತ್ಯ್ರ ಹೋರಾಟʼವೆಂದು ಬಣ್ಣಿಸಿದ್ದ ಉತ್ತರ ಪ್ರದೇಶ ಸಂಸದ ಶಫಿಕುರ್‌ ರಹಮಾನ್‌ ಬರ್ಗ್‌ಹಾಗೂ ಇನ್ನಿಬ್ಬರ ವಿರುದ್ಧ ಬುಧವಾರ ಪ್ರಕರಣ ದಾಖಲಾಗಿದೆ.

ADVERTISEMENT

ಅಫ್ಗಾನಿಸ್ತಾನದಲ್ಲಿನ ಆಡಳಿತ ಬದಲಾವಣೆಯನ್ನು ಬೆಂಬಲಿಸಿದ್ದ ಬರ್ಗ್‌, ತಮ್ಮ ದೇಶದ ಸ್ವಾತಂತ್ರ್ಯಕ್ಕಾಗಿ ತಾಲಿಬಾನ್‌ಹೋರಾಟ ನಡೆಸುತ್ತಿದೆ. ಅಫ್ಗನ್ನರು ತಾಲಿಬಾನ್‌ ನೇತೃತ್ವದಲ್ಲಿ ಸ್ವಾತಂತ್ರ್ಯ ಪಡೆಯಲು ಬಯಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದರು.

ಸಮಾಜವಾದಿ ಪಕ್ಷದವರಾದ ಬರ್ಗ್‌ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌124ಎ (ದೇಶದ್ರೋಹ),ಸೆಕ್ಷನ್‌ 153ಎ (ದ್ವೇಷಕ್ಕೆ ಉತ್ತೇಜನ) ಮತ್ತುಸೆಕ್ಷನ್‌ 295ಎಅಡಿಯಲ್ಲಿ (ಧಾರ್ಮಿಕ ಭಾವನೆಗಳಿಗೆ ದಕ್ಕೆ) ಪ್ರಕರಣ ದಾಖಲಾಗಿದೆ.

ವಿಧಾನಸಭೆಯಲ್ಲಿ ಮಾತು ಮುಂದುವರಿಸಿದ ಯೋಗಿ,ʼಕಳೆದ ನಾಲ್ಕು ವರ್ಷಗಳಲ್ಲಿ ರಾಜ್ಯದ ಜನರ ತಲಾದಾಯವನ್ನು ದ್ವಿಗುಣಗೊಳಿಸಲಾಗಿದೆʼ ಎಂದು ಹೇಳಿಕೊಂಡಿದ್ದಾರೆ.

ʼ2017ರಲ್ಲಿ ಸರ್ಕಾರವು ಬಜೆಟ್‌ ಮಂಡಿಸಿತ್ತು.ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಭಿವೃದ್ಧಿ ಮತ್ತು ನಂಬಿಕೆ ಎಲ್ಲರಿಗಾಗಿ ಎಂಬ ಪ್ರಜ್ಞೆ ಹೊಂದಿದ್ದಾರೆ. ಇದು ನಮ್ಮ ಸಂಸ್ಕೃತಿ. ಪಂಡಿತ್‌ ದೀನ ದಯಾಳ್‌ ಉಪಾದ್ಯಾಯರು ಸಮಾಜದಿಂದಲೂ ಇದನ್ನು ನಿರೀಕ್ಷಿಸುತ್ತಿದ್ದರು. ನಮ್ಮ ಸರ್ಕಾರ ಯಾವುದೇ ತಾರತಮ್ಯವಿಲ್ಲದೆ ಯೋಜನೆಗಳ ಪ್ರಯೋಜನಗಳನ್ನು ಒದಗಿಸಿದೆʼ ಎಂದಿದ್ದಾರೆ.

ʼಕಳೆದ ನಾಲ್ಕು ವರ್ಷಗಳಲ್ಲಿ ಬಜೆಟ್‌ನ ವ್ಯಾಪ್ತಿ ವಿಸ್ತರಿಸಲ್ಪಟ್ಟಿದೆ.24 ಕೋಟಿ ಜನರಿಗಾಗಿ ಸಣ್ಣ ಗಾತ್ರದ ಬಜೆಟ್‌ ಮಂಡಿಸುವುದು ಸಣ್ಣ ಮನಸ್ಥಿತಿಯ ಸಂಕೇತವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇವನ್ನೂ ಓದಿ
*

*
*
​​*
*
*
*
*
​​*ಅಫ್ಗನ್‌ನಲ್ಲಿ 20 ವರ್ಷಗಳ ಸುದೀರ್ಘ ರಕ್ತಸಿಕ್ತ ಅಧ್ಯಾಯ ಅಂತ್ಯಕ್ಕೆ ಬದ್ಧ: ಬೈಡನ್
*ಅಫ್ಗಾನಿಸ್ತಾನದಲ್ಲಿ ಅಮೆರಿಕದ ಪಾತ್ರವೇನು? ಇಲ್ಲಿದೆ 20 ವರ್ಷಗಳ ‘ರಕ್ತ ಚರಿತ್ರೆ’
​*
*
​*
*​

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.