ADVERTISEMENT

ವಾಂಗ್ಚುಕ್‌ಗೆ ಪಾಕ್ ನಂಟಿನ ಬಗ್ಗೆ ತನಿಖೆ: ಪೊಲೀಸ್‌ ಮಹಾ ನಿರ್ದೇಶಕ ಜಾಮ್‌ವಾಲ್‌

ಪಿಟಿಐ
Published 27 ಸೆಪ್ಟೆಂಬರ್ 2025, 16:28 IST
Last Updated 27 ಸೆಪ್ಟೆಂಬರ್ 2025, 16:28 IST
<div class="paragraphs"><p>ಸೋನಮ್‌ ವಾಂಗ್ಚುಕ್‌</p></div>

ಸೋನಮ್‌ ವಾಂಗ್ಚುಕ್‌

   

ಲೇಹ್‌: ಪರಿಸರ ಹೋರಾಟ ಗಾರ ಸೋನಮ್‌ ವಾಂಗ್ಚುಕ್‌ ಅವರಿಗೆ ಪಾಕಿಸ್ತಾನದೊಂದಿಗೆ ನಂಟು ಇತ್ತು ಎಂಬ ಆರೋಪದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಲಡಾಖ್ ಪೊಲೀಸ್‌ ಮಹಾ ನಿರ್ದೇಶಕ ಎಸ್‌.ಡಿ.ಸಿಂಗ್‌ ಜಾಮ್‌ವಾಲ್‌ ಶನಿವಾರ ತಿಳಿಸಿದರು.

ಪಾಕಿಸ್ತಾನಕ್ಕೆ ಗುಪ್ತಚರ ಮಾಹಿತಿ ನೀಡುತ್ತಿದ್ದ ವ್ಯಕ್ತಿಯನ್ನು ಕಳೆದ ತಿಂಗಳು ಬಂಧಿಸಲಾಗಿದ್ದು, ಆತ ವಾಂಗ್ಚುಕ್‌ ಅವರ ಪ್ರತಿಭಟನೆಯ ವಿಡಿಯೊ ಹಂಚಿಕೊಂಡಿದ್ದ. ಹೀಗಾಗಿ ಈ ಆಯಾಮದಲ್ಲಿ ತನಿಖೆ ನಡೆಸ
ಲಾಗುತ್ತಿದೆ ಎಂದರು. 

ADVERTISEMENT

ವಾಂಗ್ಚುಕ್‌ ಅವರ ಭಾಷಣಗಳು ಗಲಭೆಗೆ ಪ್ರಚೋದನೆ ನೀಡಿವೆ ಎಂದು ಅವರು ಆರೋಪಿಸಿದರು.

ವಾಂಗ್ಚುಕ್‌ ಅವರ ವಿದೇಶ ಭೇಟಿಗಳು ಅನುಮಾನಾಸ್ಪದ ವಾಗಿದ್ದು, ಈ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಅವರು ಪಾಕಿಸ್ತಾನದ ಡಾನ್‌ ನಲ್ಲಿ ನಡೆದ ಕಾರ್ಯಕ್ರಮಕ್ಕೆ ಮತ್ತು ಬಾಂಗ್ಲಾದೇಶಕ್ಕೆ ಭೇಟಿ ನೀಡಿದ್ದರು ಎಂದು ಹೇಳಿದರು. ಬಂಧಿತ ವಾಂಗ್ಚುಕ್‌ ಅವರನ್ನು ರಾಜಸ್ಥಾನದ ಜೋಧಪುರ ಕಾರಾಗೃಹದಲ್ಲಿ ಇರಿಸಲಾಗಿದೆ. 

ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್‌ ಮತ್ತು ಅರೆಸೇನಾ ಪಡೆಯು ಗಸ್ತು
ತೀವ್ರಗೊಳಿಸಿವೆ. ತಲೆಮರೆಸಿಕೊಂಡಿರುವ ಗಲಭೆಕೋರರ ಬಂಧನಕ್ಕಾಗಿ ಶೋಧ ನಡೆಸಲಾಗುತ್ತಿದೆ. ಲೆಫ್ಟಿನೆಂಟ್‌ ಗವರ್ನರ್‌ ಕವೀಂದರ್‌ ಗುಪ್ತಾ ನೇತೃತ್ವದ ಉನ್ನತ ಮಟ್ಟದ ಸಭೆಯಲ್ಲಿ ಕೇಂದ್ರಾಡಳಿತ ಪ್ರದೇಶದ ಕಾನೂನು ಸುವ್ಯವಸ್ಥೆಯ ಕುರಿತು ಚರ್ಚಿಸಲಾಯಿತು.

ಕರ್ಫ್ಯೂ ಸಡಿಲಿಕೆ

ಶ್ರೀನಗರ: ಲಡಾಖ್‌ಗೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸಿ ಲೇಹ್‌ ನಲ್ಲಿ ನಡೆದ ಪ್ರತಿಭಟನೆಯು ಹಿಂಸಾಚಾರಕ್ಕೆ ತಿರುಗಿದ ಬೆನ್ನಲ್ಲೇ ನಗರದಲ್ಲಿ ಜಾರಿಗೊಳಿಸಿದ್ದ ಕರ್ಫ್ಯೂವನ್ನು ಮೂರು ದಿನಗಳ ಬಳಿಕ ಶನಿವಾರ ಸಡಿಲಿಸಲಾಗಿದೆ. ಹಂತಹಂತವಾಗಿ ಕರ್ಫ್ಯೂ ಸಡಿಲಿಸಲಾಗುತ್ತದೆ. ಹಳೆಯ ನಗರದಲ್ಲಿ ಮಧ್ಯಾಹ್ನ 1ರಿಂದ 3ಗಂಟೆವರೆಗೆ, ಹೊಸ ಪ್ರದೇಶದಲ್ಲಿ ಮಧ್ಯಾಹ್ನ 3.30ರಿಂದ 5.30ರವರೆಗೆ ನಿರ್ಬಂಧವನ್ನು ಸಡಿಲಿಸಲಾಗುತ್ತದೆ. ಮುಂದಿನ ಹಂತದ ಕರ್ಫ್ಯೂ ಸಡಿಲಿಕೆಗೂ ಮುನ್ನ ಪರಿಸ್ಥಿತಿಯನ್ನು ಅವಲೋಕಿಸಿ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಾಂಗ್ಚುಕ್‌ ಬಂಧನದ ಸಮರ್ಥನೆ

ಲೆಫ್ಟಿನೆಂಟ್‌ ಗವರ್ನರ್‌ ನೇತೃತ್ವದ ಆಡಳಿತವು ಶುಕ್ರವಾರ ತಡರಾತ್ರಿ ಹೇಳಿಕೆ ಬಿಡುಗಡೆ ಮಾಡಿ, ವಾಂಗ್ಚುಕ್‌  ಅವರ ಬಂಧನವನ್ನು ಸಮರ್ಥಿಸಿಕೊಂಡಿದೆ. ವಾಂಗ್ಚುಕ್‌ ಅವರ ನಿರಂತರ ಪ್ರಚೋದನಕಾರಿ ಭಾಷಣಗಳು, ನೇಪಾಳ ಚಳವಳಿಯ ಉಲ್ಲೇಖದಿಂದಲೇ ಬುಧವಾರ ನಗರದಲ್ಲಿ ಹಿಂಸಾಚಾರ ನಡೆದು ನಾಲ್ವರು ಮೃತಪಟ್ಟಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಅದು ಹೇಳಿದೆ.

ಲೇಹ್‌ನಲ್ಲಿ ಪರಿಸ್ಥಿತಿಯನ್ನು ಸಹಜ ಸ್ಥಿತಿಗೆ ತರಲು ವಾಂಗ್ಚುಕ್‌ ಅವರ ಬಂಧನ ಅವಶ್ಯಕವಾಗಿತ್ತು ಎಂದು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.