ADVERTISEMENT

ಕಾಶ್ಮೀರ ಕಣಿವೆಗೆ ರೈಲಿನಲ್ಲಿ ಟ್ಯಾಂಕ್‌, ಫಿರಂಗಿ ಸಾಗಣೆ

ಪಿಟಿಐ
Published 17 ಡಿಸೆಂಬರ್ 2025, 16:07 IST
Last Updated 17 ಡಿಸೆಂಬರ್ 2025, 16:07 IST
ಭಾರತೀಯ ಸೇನೆಯು ಜಮ್ಮು ಭಾಗದಿಂದ ಕಾಶ್ಮೀರದ ಅನಂತ್‌ನಾಗ್‌ಗೆ ವಿಶೇಷ ರೈಲಿನಲ್ಲಿ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸಿತು –ಪಿಟಿಐ ಚಿತ್ರ
ಭಾರತೀಯ ಸೇನೆಯು ಜಮ್ಮು ಭಾಗದಿಂದ ಕಾಶ್ಮೀರದ ಅನಂತ್‌ನಾಗ್‌ಗೆ ವಿಶೇಷ ರೈಲಿನಲ್ಲಿ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಸಾಗಿಸಿತು –ಪಿಟಿಐ ಚಿತ್ರ   

ಜಮ್ಮು: ವಿಶೇಷ ರೈಲಿನ ಮೂಲಕ ಕಾಶ್ಮೀರ ಕಣಿವೆಗೆ ಟ್ಯಾಂಕ್‌ಗಳು ಮತ್ತು ಫಿರಂಗಿಗಳನ್ನು ಡಿ.16ರಂದು ಸಾಗಿಸುವ ಮೂಲಕ ಭಾರತೀಯ ಸೇನೆಯು ಪ್ರಮುಖ ಮೈಲಿಗಲ್ಲು ಸಾಧಿಸಿದೆ.

ಉತ್ತರ ರೈಲ್ವೆ ಇಲ್ಲಿಯವರೆಗೆ ಕಾಶ್ಮೀರದಿಂದ ಸೇಬುಗಳನ್ನು ಸಾಗಿಸಲು ಕಂಟೇನರ್‌ ಆಧಾರಿತ ವ್ಯಾಗನ್‌ಗಳು ಹಾಗೂ ವಾಹನಗಳು ಮತ್ತು ಸಿಮೆಂಟ್‌ ಪೂರೈಸಿದೆ. ಇದು ಕಣಿವೆಯಲ್ಲಿ ವ್ಯಾಪಾರ ಮತ್ತು ಕೈಗಾರಿಕೆಗಳನ್ನು ಬೆಂಬಲಿಸುವ ಮತ್ತೊಂದು ಉಪಕ್ರಮವನ್ನು ಸೂಚಿಸುತ್ತದೆ.

ಹೊಸ ರೈಲು ಮಾರ್ಗವು ಸೇನಾ ಸಾಮಗ್ರಿಗಳನ್ನು ಸಾಗಿಸಲು ಸಿದ್ಧವಾಗಿದೆಯೇ ಎಂದು ಪರೀಕ್ಷಿಸುವ ಉದ್ದೇಶದಿಂದ ಟ್ಯಾಂಕ್‌ಗಳು, ಫಿರಂಗಿಗಳು ಮತ್ತು ಡೋಜರ್‌ಗಳನ್ನು ಜಮ್ಮು ಪ್ರದೇಶದಿಂದ ಕಾಶ್ಮೀರದ ಅನಂತ್‌ನಾಗ್‌ಗೆ ಯಶಸ್ವಿಯಾಗಿ ಸ್ಥಳಾಂತರಿಸಲಾಯಿತು ಎಂದು ಎಡಿಜಿಪಿಐ ‘ಎಕ್ಸ್‌’ನಲ್ಲಿ ತಿಳಿಸಿದೆ.

ADVERTISEMENT

ರೈಲ್ವೆ ಇಲಾಖೆ ಜೊತೆಗಿನ ಸಮನ್ವಯದಿಂದ ಇದು ಕಾರ್ಯಗತಗೊಂಡಿದೆ. ಉಧಂಪುರ– ಶ್ರೀನಗರ– ಬಾರಾಮುಲ್ಲಾ ರೈಲು ಸಂಪರ್ಕ ಯೋಜನೆಯಿಂದಾಗಿ ಭಾರತೀಯ ಸೇನೆಯು ಉತ್ತರದ ಗಡಿಗಳಿಗೆ ಬೇಕಾದ ಸಾಮಗ್ರಿಗಳನ್ನು ಅತ್ಯಂತ ವೇಗವಾಗಿ ತಲುಪಿಸಲು ಸಾಧ್ಯವಾಗಿದೆ. ಗಡಿಯಲ್ಲಿ ಸದಾ ಸನ್ನದ್ಧವಾಗಿರಲು ಸಹಕಾರಿಯಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.