ADVERTISEMENT

ಎಸ್‌ಪಿಜಿ ತಿದ್ದುಪಡಿಗೆ ಲೋಕಸಭೆ ಒಪ್ಪಿಗೆ

ಪಿಟಿಐ
Published 27 ನವೆಂಬರ್ 2019, 19:19 IST
Last Updated 27 ನವೆಂಬರ್ 2019, 19:19 IST
ಅಮಿತ್ ಶಾ
ಅಮಿತ್ ಶಾ    

ನವದೆಹಲಿ : ವಿಶೇಷ ರಕ್ಷಣಾ ಪಡೆ (ಎಸ್‌ಪಿಜಿ) ತಿದ್ದುಪಡಿ ಮಸೂದೆಗೆ ಲೋಕಸಭೆ ಬುಧವಾರ ಅನುಮೋದನೆ ನೀಡಿದೆ. ಇದರಿಂದಾಗಿ, ಕಾಂಗ್ರೆಸ್‌ ಅಧ್ಯಕ್ಷೆಸೋನಿಯಾ ಗಾಂಧಿ ಮತ್ತು ಅವರ ಕುಟುಂಬದ ಸದಸ್ಯರಿಗೆ ಇನ್ನು ಮುಂದೆ ಎಸ್‌ಪಿಜಿ ಭದ್ರತೆ ದೊರೆಯುವುದಿಲ್ಲ.

ಕಾಂಗ್ರೆಸ್‌, ಡಿಎಂಕೆ ಮತ್ತು ಎಡಪಕ್ಷಗಳ ಸದಸ್ಯರ ಸಭಾತ್ಯಾಗದ ನಡುವೆ ಈ ಮಸೂದೆಗೆ ಲೋಕಸಭೆ ಧ್ವನಿಮತದ ಮೂಲಕ ಒಪ್ಪಿಗೆ ಸೂಚಿಸಿತು.

ತಿದ್ದುಪಡಿ ಅನ್ವಯ, ಮಾಜಿ ಪ್ರಧಾನಿಗಳು ಮತ್ತು ಅವರ ಜತೆ ವಾಸಿಸುವ ಕುಟುಂಬದ ಸದಸ್ಯರಿಗೂ ಎಸ್‌ಪಿಜಿ ರಕ್ಷಣೆ ಒದಗಿಸಲಿದೆ. ಆದರೆ, ಅಧಿಕಾರ ತೊರೆದ ದಿನಾಂಕದಿಂದ ಐದು ವರ್ಷಗಳ ಕಾಲ ಸರ್ಕಾರದಿಂದ ಹಂಚಿಕೆಯಾದ ನಿವಾಸದಲ್ಲಿ ವಾಸಿಸುವ ಮಾಜಿ ಪ್ರಧಾನಿ ಮತ್ತು ಅವರ ತಕ್ಷಣದ ಕುಟುಂಬದ ಸದಸ್ಯರಿಗೆ ಮಾತ್ರ ಇದು ಅನ್ವಯವಾಗಲಿದೆ.

ADVERTISEMENT

ಇ–ಸಿಗರೇಟ್‌ ನಿಷೇಧ: ಎಲೆಕ್ಟ್ರಾನಿಕ್‌ ಸಿಗರೇಟ್‌ ನಿಷೇಧಿಸುವ ಮಸೂದೆಗೂ ಲೋಕಸಭೆ ಅನುಮೋದನೆ ನೀಡಿತು. ಈ ಮುಂಚೆ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಲೋಕಸಭೆ ದಮನ್‌–ದಿಯು ಹಾಗೂ ದಾದ್ರ ಮತ್ತು ನಗರ್‌ ಹವೇಲಿ ವಿಲೀನಗೊಳಿಸುವ ಮಸೂದೆಗೂ ಅನುಮೋದನೆ ನೀಡಿತು.

ಸೋನಿಯಾ ಕುಟುಂಬಕ್ಕೆ ನೀಡಿರುವ ಭದ್ರತೆ ವಾಪಸ್‌ ಪಡೆದಿಲ್ಲ. ಅವರಿಗೆ ‘ಝಡ್‌–ಪ್ಲಸ್‌’ ಭದ್ರತೆ ಒದಗಿಸಲಾಗಿದೆ. ಬಿಜೆಪಿ ಯಾರ ವಿರುದ್ಧವೂ ದ್ವೇಷ ಸಾಧಿಸುತ್ತಿಲ್ಲ.
-ಅಮಿತ್‌ ಶಾ, ಕೇಂದ್ರ ಗೃಹ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.