ADVERTISEMENT

ತಾಂತ್ರಿಕ ದೋಷ: ಸ್ಪೈಸ್‌ಜೆಟ್‌ನ ದುಬೈ–ಮಧುರೈ ವಿಮಾನ ವಿಳಂಬ

ಪಿಟಿಐ
Published 12 ಜುಲೈ 2022, 17:18 IST
Last Updated 12 ಜುಲೈ 2022, 17:18 IST

ನವದೆಹಲಿ (ಪಿಟಿಐ): ‘ಮುಂಬದಿಯ ಚಕ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ದುಬೈಯಿಂದ ಮಧುರೈಗೆ ಸೋಮವಾರ ಬರಬೇಕಿದ್ದ ಸ್ಪೈಸ್‌ಜೆಟ್‌ನ ಬೋಯಿಂಗ್‌ ಬಿ737 ಮ್ಯಾಕ್ಸ್‌ ವಿಮಾನ ವಿಳಂಬವಾಗಿದೆ’ ಎಂದುನಾಗರಿಕ ವಿಮಾನಯಾನ ನಿರ್ದೇಶನಾಲಯದ (ಡಿಜಿಸಿಎ) ಅಧಿಕಾರಿಯೊಬ್ಬರು ಹೇಳಿದ್ದಾರೆ.

ಈ ಘಟನೆಯೊಂದಿಗೆ 24ದಿನಗಳಲ್ಲಿ ಸಂಸ್ಥೆಯ 9 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಂತಾಗಿದೆ.

18 ದಿನಗಳಲ್ಲಿ ಸಂಸ್ಥೆಯ 8 ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ್ದಡಿಜಿಸಿಎಜುಲೈ 6ರಂದು ಸ್ಪೈಸ್‌ಜೆಟ್‌ಗೆ ಕಾರಣ ಕೇಳಿ ನೋಟಿಸ್‌ ನೀಡಿತ್ತು.ಸುರಕ್ಷಿತ, ಸಮರ್ಥ ಹಾಗೂ ವಿಶ್ವಾಸಾರ್ಹ ವಿಮಾನ ಸೇವೆಗಳನ್ನು ಒದಗಿಸುವಲ್ಲಿ ಸ್ಪೈಸ್‌ಜೆಟ್‌ ವಿಫಲವಾಗಿದೆ ಎಂದೂ ಹೇಳಿತ್ತು.

ADVERTISEMENT

‘ವಿಮಾನವು ದುಬೈನಲ್ಲಿ ಇಳಿದ ಬಳಿಕ ಎಂಜಿನಿಯರ್‌ವೊಬ್ಬರು ಪರಿಶೀಲನೆ ನಡೆಸಿದ್ದರು. ವಿಮಾನದ ಮುಂಬದಿಯ ಚಕ್ರದ ಸ್ಟರ್ಟ್‌ ನಿಗದಿಗಿಂತಲೂ ಹೆಚ್ಚು ಸಂಕುಚಿತಗೊಂಡಿದ್ದರಿಂದ ಹಾರಾಟಕ್ಕೆ ಅವಕಾಶ ನಿರಾಕರಿಸಲಾಗಿತ್ತು. ವಿಷಯ ತಿಳಿದೊಡನೆ ಸಂಸ್ಥೆಯು ಮುಂಬೈನಿಂದ ದುಬೈಗೆ ಮತ್ತೊಂದು ವಿಮಾನ ರವಾನಿಸಿತ್ತು’ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

‘ಕೊನೆ ಕ್ಷಣದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ದುಬೈಯಿಂದ ಮಧುರೈಗೆ ಬರಬೇಕಿದ್ದ ‘ಎಸ್‌ಜಿ23’ ವಿಮಾನ ತಡವಾಗಿದೆ. ವಿಷಯ ತಿಳಿದೊಡನೆ ಮತ್ತೊಂದು ವಿಮಾನವನ್ನು ದುಬೈಗೆ ಕಳುಹಿಸಿ ಪ್ರಯಾಣಿಕರನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರಲಾಗಿದೆ’ ಎಂದು ಸ್ಪೈಸ್‌ಜೆಟ್‌ ವಕ್ತಾರರೊಬ್ಬರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.