ADVERTISEMENT

ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಐಐಟಿ ದೆಹಲಿಗೆ ಭೇಟಿ

ಪಿಟಿಐ
Published 17 ಅಕ್ಟೋಬರ್ 2025, 13:03 IST
Last Updated 17 ಅಕ್ಟೋಬರ್ 2025, 13:03 IST
   

ನವದೆಹಲಿ: ಶ್ರೀಲಂಕಾ ಪ್ರಧಾನಿ ಹರಿಣಿ ಅಮರಸೂರ್ಯ ಶುಕ್ರವಾರ ಇಲ್ಲಿನ ಭಾರತೀಯ ತಂತ್ರಜ್ಞಾನ ಸಂಸ್ಥೆಗೆ (ಐಐಟಿ) ಭೇಟಿ ನೀಡಿ ಸಂಶೋಧಕರು ಮತ್ತು ಶಿಕ್ಷಣ ತಜ್ಞರೊಂದಿಗೆ ಸಂವಾದ ನಡೆಸಿದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳ ಭಾರತ ಭೇಟಿಯಲ್ಲಿರುವ ಶ್ರೀಲಂಕಾ ಪ್ರಧಾನಿ, ಇದಕ್ಕೂ ಮೊದಲು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿ ಅಭಿವೃದ್ಧಿ ಸಹಕಾರ ಮತ್ತು ಭಾರತೀಯ ಮೀನುಗಾರರ ಕ್ಷೇಮ ಸೇರಿದಂತೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

ದೆಹಲಿ ಶಿಕ್ಷಣ ಸಚಿವ ಆಶಿಶ್ ಸೂದ್ ಅವರೊಂದಿಗೆ ರೋಹಿಣಿಯಲ್ಲಿರುವ ಸಿಎಂ ಶ್ರೀ ಶಾಲೆಗೆ ಭೇಟಿ ನೀಡಿದ್ದರು. ರಾಜಧಾನಿಯ ಆಧುನಿಕ ಶಾಲಾ ಮೂಲಸೌಕರ್ಯ, ನವೀನ ಬೋಧನಾ ವಿಧಾನಗಳು ಮತ್ತು ಡಿಜಿಟಲ್ ಕಲಿಕಾ ಪರಿಸರದ ಬಗ್ಗೆ ತಿಳಿಯುವ ಗುರಿಯನ್ನು ಈ ಭೇಟಿ ಹೊಂದಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.