ADVERTISEMENT

ಹಿಂದೂಗಳು ಮುಸ್ಲಿಂ ಮಹಿಳೆಯರನ್ನು ಗ್ಯಾಂಗ್‌ ರೇಪ್ ಮಾಡಬೇಕು ಎಂದ ಬಿಜೆಪಿ ನಾಯಕಿ!

​ಪ್ರಜಾವಾಣಿ ವಾರ್ತೆ
Published 1 ಜುಲೈ 2019, 13:15 IST
Last Updated 1 ಜುಲೈ 2019, 13:15 IST
   

ನವದೆಹಲಿ: ಹಿಂದೂ ಗಂಡಸರು ಮುಸ್ಲಿಂ ಮನೆಗಳಿಗೆ ನುಗ್ಗಿ ಮುಸ್ಲಿಂ ಮಹಿಳೆಯರ ಮೇಲೆ ಅತ್ಯಾಚಾರವೆಸಗಬೇಕು- ಹೀಗೊಂದು ಬರಹವನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದು ಉತ್ತರಪ್ರದೇಶದ ಬಿಜೆಪಿಯ ಮಹಿಳಾ ಮೋರ್ಚಾ ನಾಯಕಿಸುನಿತಾ ಸಿಂಗ್ ಗೌರ್.

ಪೋಸ್ಟ್‌ನಲ್ಲಿ ಏನಿದೆ?
ಅವರಿಗಿರುವ ಒಂದೇ ಒಂದು ಪರಿಹಾರ ( ಮುಸ್ಲಿಮರಿಗೆ). ಹಿಂದೂ ಸಹೋದರರು10 ಮಂದಿಯ ತಂಡವೊಂದನ್ನು ರಚಿಸಿ ಮುಸ್ಲಿಮರ ಅಮ್ಮ ಮತ್ತು ಸಹೋದರಿಯರನ್ನುಬೀದಿಗೆ ತಂದು ಸಾಮೂಹಿಕ ಅತ್ಯಾಚಾರವೆಸಗಬೇಕು.ಆಮೇಲೆ ಎಲ್ಲರಿಗೂ ಕಾಣುವಂತೆ ನಗರದ ಮಧ್ಯೆ ತೂಗು ಹಾಕಬೇಕು ಎಂದು ಹಿಂದಿಯಲ್ಲಿ ಬರೆದು ಗೌರ್ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ್ದರು.

ಮುಸ್ಲಿಮರ ಅಮ್ಮ ಮತ್ತು ಸಹೋದರಿಯರ ಮಾನಭಂಗ ಮಾಡಬೇಕು. ಭಾರತವನ್ನು ರಕ್ಷಣೆ ಮಾಡಲು ಬೇರೆ ಯಾವ ದಾರಿಯೂ ಇಲ್ಲ ಎನ್ನುವುದು ಗೌರ್ ವಾದ.

ADVERTISEMENT

ಲಲ್ಲನ್‌ಟಾಪ್ ಈ ಬಗ್ಗೆ ಸುದ್ದಿ ಮಾಡಿದ್ದು, ಗೌರ್ ಆ ಪೋಸ್ಟ್ ಡಿಲೀಟ್ ಮಾಡಿದ್ದಾರೆ.ಆದರೆ ಪೋಸ್ಟ್‌ನ ಸ್ಕ್ರೀನ್ ಶಾಟ್ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಏತನ್ಮಧ್ಯೆ, ಗೌರ್ ಪೋಸ್ಟ್ ಮಾಡಿದ್ದು ಯಾವಾಗ ಎಂಬುದರ ಮಾಹಿತಿ ದಿ ವೈರ್‌ಗೆ ಸಿಕ್ಕಿಲ್ಲ.

ಗೌರ್ ಅವರ ಪೋಸ್ಟ್ ಬಗ್ಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿದ ಬಿಜೆಪಿ ಮಹಿಳಾ ಮೋರ್ಚಾದ ರಾಷ್ಟ್ರಾಧ್ಯಕ್ಷೆ ವಿಜಯಾ ರಹಾತ್‌ಕರ್, ಈ ರೀತಿಯ ದ್ವೇಷದ ಮಾತುಗಳನ್ನು ನಾವು ಸಹಿಸಿಕೊಳ್ಳುವುದಿಲ್ಲ.ಗೌರ್ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದಿದ್ದಾರೆ.

ರಹಾತ್‌ಕರ್ ಅವರು ಟ್ವೀಟ್ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ ಜೂನ್ 27ರಂದು ಗೌರ್ಅವರನ್ನು ಆ ಸ್ಥಾನದಿಂದ ಉಚ್ಛಾಟಿಸಲಾಗಿದೆ.

ಅಂದ ಹಾಗೆ ಬಿಜೆಪಿ ನೇತಾರರು ಈ ರೀತಿಯ ಹೇಳಿಕೆಗಳನ್ನು ನೀಡಿದ್ದು ಇದು ಮೊದಲೇನೂ ಅಲ್ಲ.ಆದರೆ ಅತ್ಯಾಚಾರ ಮಾಡಬೇಕು ಎಂಬ ಹೇಳಿಕೆಯನ್ನು ಮಹಿಳಾ ಮೋರ್ಚಾದ ನಾಯಕಿಯೊಬ್ಬರು ಹೇಳಿದ್ದು ಎಲ್ಲರಲ್ಲಿಯೂ ಅಚ್ಚರಿಯನ್ನುಂಟು ಮಾಡಿದೆ.

ಇದನ್ನೂ ಓದಿ:

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.