ADVERTISEMENT

ದತ್ತಾಂಶ ರಕ್ಷಣೆ ಕಾನೂನು: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌

ಪಿಟಿಐ
Published 16 ಫೆಬ್ರುವರಿ 2026, 16:02 IST
Last Updated 16 ಫೆಬ್ರುವರಿ 2026, 16:02 IST
ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌   

ನವದೆಹಲಿ: ಡಿಜಿಟಲ್‌ ವೈಯಕ್ತಿಕ ದತ್ತಾಂಶ ರಕ್ಷಣೆ (ಡಿಪಿಡಿಪಿ) ಕಾಯ್ದೆ–2023 ಹಲವಾರು ನಿಬಂಧನೆಗಳ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಸೋಮವಾರ ಒಪ್ಪಿಗೆ ನೀಡಿದೆ.

‘ಸಂಸತ್ತಿನಲ್ಲಿ ಜಾರಿಯಾದ ನಿಬಂಧನೆಗಳ ಕುರಿತು ನಾವು ಆಲಿಸದೇ, ಮಧ್ಯಂತರ ತಡೆ ನೀಡಲು ಸಾಧ್ಯವಿಲ್ಲ’ ಎಂದು ನ್ಯಾಯಪೀಠ  ಸ್ಪಷ್ಟಪಡಿಸಿದೆ.

ಡಿಪಿಡಿಪಿ ಕಾಯ್ದೆ ಹಾಗೂ ಮಾಹಿತಿ ಹಕ್ಕು ಕಾಯ್ದೆಯ ನಿಬಂಧನೆಗಳ ಡಿಜಿಟಲ್‌ ದತ್ತಾಂಶ ಕಾಯ್ದೆಗೆ ಸಂಬಂಧಿಸಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ಕುರಿತು ಉತ್ತರಿಸಲು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸುವಂತೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ.ಜಾಯ್‌ಮಾಲ್ಯ ಬಾಗ್ಚಿ, ನ್ಯಾ. ವಿಪುಲ್‌ ಎಂ ಪಂಚೋಲಿ ಅವರಿದ್ದ ಪೀಠವು ತಿಳಿಸಿದೆ.

ADVERTISEMENT

ಡಿಜಿಟಲ್‌ ನ್ಯೂಸ್‌ ಫಾಟ್‌ಫಾರ್ಮ್‌ ‘ದಿ ರಿಪೋರ್ಟರ್‌ ಕಲೆಕ್ಟಿವ್‌’ ಪ‍ರವಾಗಿ ವೆಂಕಟೇಶ್‌ ನಾಯಕ್‌, ಪತ್ರಕರ್ತ ನಿತಿನ್‌ ಸೇಥಿ ಹಗೂ ನ್ಯಾನಷಲ್‌ ಕ್ಯಾಂಪೇನ್‌ ಫಾರ್‌ ಪೀಪಲ್ಸ್‌ ರೈಟ್ಸ್‌ ಟೂ ಇನ್ಫಾರ್‌ಮೇಶನ್‌ ಸಲ್ಲಿಸಿದ್ದ ಮೂರು ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಲು ನಿರ್ಧರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.