ನವದೆಹಲಿ: ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಸೇರಿದಂತೆ ಹಲವು ನ್ಯಾಯಮೂರ್ತಿಗಳು ನೀಡಿರುವ ಆಸ್ತಿ ವಿವರವನ್ನು ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.
ಪಾರದರ್ಶಕತೆಯನ್ನು ಹೆಚ್ಚು ಮಾಡುವ ಉದ್ದೇಶದೊಂದಿಗೆ, ನ್ಯಾಯಮೂರ್ತಿಗಳ ಆಸ್ತಿಯ ಅಗತ್ಯ ವಿವರಗಳನ್ನು ಸಾರ್ವಜನಿಕಗೊಳಿಸುವ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ನ ಪೂರ್ಣ ಪೀಠವು ಈಚೆಗೆ ತೆಗೆದುಕೊಂಡಿತ್ತು.
‘ಯಾವೆಲ್ಲ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರವನ್ನು ಈಗಾಗಲೇ ಸಲ್ಲಿಸಿದ್ದಾರೋ ಅವರಿಗೆ ಸಂಬಂಧಿಸಿದ ವಿವರ ನೀಡಲಾಗುತ್ತಿದೆ. ಇನ್ನುಳಿದ ನ್ಯಾಯಮೂರ್ತಿಗಳ ಆಸ್ತಿ ವಿವರವನ್ನು ಅವರು ಸಲ್ಲಿಸಿದ ನಂತರದಲ್ಲಿ ಬಹಿರಂಗಪಡಿಸಲಾಗುತ್ತದೆ’ ಎಂದು ಕೋರ್ಟ್‌ನ ಪ್ರಕಟಣೆ ತಿಳಿಸಿದೆ. 21 ಮಂದಿ ನ್ಯಾಯಮೂರ್ತಿಗಳು ತಮ್ಮ ಆಸ್ತಿ ವಿವರ ನೀಡಿದ್ದಾರೆ.
ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ
ನಿಶ್ಚಿತ ಠೇವಣಿ: ₹55.75 ಲಕ್ಷ
ಪಿಪಿಎಫ್: ₹1.06 ಕೋಟಿ
ಜಿಪಿಎಫ್: ₹1.77 ಕೋಟಿ
ಷೇರು: ₹14 ಸಾವಿರ ಮೌಲ್ಯದ್ದು
ಮನೆ: ದಕ್ಷಿಣ ದೆಹಲಿಯಲ್ಲಿ ಒಂದು ಫ್ಲ್ಯಾಟ್ (3 ಬಿಎಚ್‌ಕೆ), ಕಾಮನ್‌ವೆಲ್ತ್ ಕ್ರೀಡಾ ಗ್ರಾಮದಲ್ಲಿ ಒಂದು ಅಪಾರ್ಟ್‌ಮೆಂಟ್ (4 ಬಿಎಚ್‌ಕೆ), ಗುರುಗ್ರಾಮದ ಸಿಸ್ಪಾಲ್ ವಿಹಾರದಲ್ಲಿನ 4ಬಿಎಚ್‌ಕೆ ಫ್ಲ್ಯಾಟ್‌ನಲ್ಲಿ ಶೇ 56ರಷ್ಟು ಪಾಲು, ಹಿಮಾಚಲ ಪ್ರದೇಶ ಡಾಲ್‌ಹೌಸಿಯಲ್ಲಿ ಮನೆ ಮತ್ತು ಜಮೀನಿನಲ್ಲಿ ಪಾಲು.
250 ಗ್ರಾಂ ಚಿನ್ನ, 2 ಕೆ.ಜಿ. ಬೆಳ್ಳಿ (ಇವುಗಳಲ್ಲಿ ಹೆಚ್ಚಿನವು ಹಿರಿಯರಿಂದ ಬಂದವು, ಉಡುಗೊರೆಯಾಗಿ ಸಿಕ್ಕವು), ಮಾರುತಿ ಸ್ವಿಫ್ಟ್ ಕಾರು.
ನ್ಯಾಯಮೂರ್ತಿ ಬಿ.ಆರ್. ಗವಾಯಿ
ಬ್ಯಾಂಕ್ ಖಾತೆಯಲ್ಲಿ: ₹19.63 ಲಕ್ಷಕ್ಕೂ ಹೆಚ್ಚು
ಮನೆ: ಮಹಾರಾಷ್ಟ್ರದ ಅಮರಾವತಿಯಲ್ಲಿ ಒಂದು ಮನೆ (ತಂದೆಯಿಂದ ಬಂದಿದ್ದು), ಮುಂಬೈನ ಬಾಂದ್ರಾದಲ್ಲಿ ಮತ್ತು ದೆಹಲಿಯ ಡಿಫೆನ್ಸ್ ಕಾಲನಿಯಲ್ಲಿ ಅಪಾರ್ಟ್‌ಮೆಂಟ್‌ಗಳು, ಅಮರಾವತಿ ಮತ್ತು ನಾಗ್ಪುರದಲ್ಲಿ ಕೃಷಿ ಜಮೀನು.
ಚಿನ್ನ, ಬೆಳ್ಳಿ ಆಭರಣ: ₹5.25 ಲಕ್ಷ (ಪತ್ನಿಯ ಹೆಸರಿನಲ್ಲಿ ₹29.70 ಲಕ್ಷ ಮೌಲ್ಯದ ಆಭರಣ)
ಠೇವಣಿ: ₹61,320
ನ್ಯಾಯಮೂರ್ತಿ ಸೂರ್ಯ ಕಾಂತ್
ಮನೆ: ಚಂಡೀಗಢದಲ್ಲಿ ಒಂದು ಮನೆ, ಪಂಚಕುಲಾದಲ್ಲಿ 13 ಎಕರೆ ಕೃಷಿ ಜಮೀನು, ಗುರುಗ್ರಾಮದಲ್ಲಿ 300 ಚದರ ಯಾರ್ಡ್ ಪ್ಲಾಟ್.
ಠೇವಣಿ: ₹4.11 ಕೋಟಿ
ಚಿನ್ನಾಭರಣ: 100 ಗ್ರಾಂ
ಮೂರು ಬೆಲೆಬಾಳುವ ವಾಚುಗಳು
ನ್ಯಾಯಮೂರ್ತಿ ಅಭಯ್ ಎಸ್. ಓಕ
ಮನೆ, ಜಮೀನು: ಥಾಣೆಯಲ್ಲಿ ಫ್ಲ್ಯಾಟ್, ಥಾಣೆಯಲ್ಲಿ ಇನ್ನೂ ಪಾಲು ಆಗದಿರುವ ಕೃಷಿ ಜಮೀನು
ನಿಶ್ಚಿತ ಠೇವಣಿ: ₹21.76 ಲಕ್ಷ
ಉಳಿತಾಯ ಖಾತೆ: ₹9.10 ಲಕ್ಷ
ನ್ಯಾಯಮೂರ್ತಿ ವಿಕ್ರಮ ನಾಥ್
ಮನೆ: ನೊಯ್ಡಾದಲ್ಲಿ 2 ಬಿಎಚ್‌ಕೆ ಫ್ಲ್ಯಾಟ್, ಪ್ರಯಾಗರಾಜ್‌ನಲ್ಲಿ ಬಂಗಲೆ, ಕೌಶಂಬಿಯಲ್ಲಿ 20 ಬಿಘಾ ವಿಸ್ತೀರ್ಣದ ಕೃಷಿ ಜಮೀನು
ಹೂಡಿಕೆ: ₹1.5 ಕೋಟಿ
ನ್ಯಾಯಮೂರ್ತಿ ಕೆ.ವಿ. ವಿಶ್ವನಾಥನ್
ಹೂಡಿಕೆಗಳು: ₹120 ಕೋಟಿ
ಆಸ್ತಿ: ದೆಹಲಿಯ ಸಫ್ದರ್‌ಜಂಗ್ ಅಭಿವೃದ್ಧಿ ಪ್ರದೇಶ ಮತ್ತು ಗುಲ್ಮೊಹರ್ ಪಾರ್ಕ್‌ನಲ್ಲಿ ಆಸ್ತಿ, ತಮಿಳುನಾಡಿನ ಕೊಯಮತ್ತೂರಿನಲ್ಲಿ ಅಪಾರ್ಟ್‌ಮೆಂಟ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.