ನವದೆಹಲಿ: ಪಂಜಾಬ್ ಭೇಟಿಯ ಸಂದರ್ಭ ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತೆಯಲ್ಲಿ ಉಂಟಾಗಿದ್ದ ಲೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ನಡೆಸಬಾರದು ಎಂದು ಸುಪ್ರೀಂ ಕೋರ್ಟ್‌ನ ವಕೀಲ ವಿಷ್ಣು ಜೈನ್ ಅವರಿಗೆ ಬೆದರಿಕೆ ಕರೆ ಬಂದಿದೆ.
ಈ ಮೊದಲು ಜನವರಿ 12ರಂದು ಕೂಡ ವಿಷ್ಣು ಜೈನ್ ಅವರಿಗೆ ಪ್ರಕರಣಕ್ಕೆ ಸಂಬಂಧಿಸಿ ವಾದಿಸಬಾರದು ಮತ್ತು ಕೂಡಲೇ ವಿಚಾರಣೆಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಬೆದರಿಕೆ ಕರೆ ಬಂದಿತ್ತು.
ಭದ್ರತಾ ಲೋಪ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಮೂರ್ತಿ ಇಂದು ಮಲ್ಹೋತ್ರಾ ನೇತೃತ್ವದ ಸಮಿತಿ ರಚಿಸಲಾಗಿದೆ.
ಬೆದರಿಕೆ ಕರೆ ಕುರಿತು ವಕೀಲ ವಿಷ್ಣು ಜೈನ್, ದೆಹಲಿ ಪೊಲೀಸ್ ವಿಶೇಷ ಘಟಕಕ್ಕೆ ಮಾಹಿತಿ ನೀಡಿದ್ದಾರೆ.
ಈ ಮೊದಲು ಬೆದರಿಕೆ ಒಡ್ಡಿದ್ದ ರೀತಿಯಲ್ಲಿಯೇ ಮತ್ತೆ ಕರೆ ಬಂದಿತ್ತು. ಪ್ರಕರಣದ ವಕಾಲತ್ತು ನಡೆಸಬಾರದು ಎಂದು ಕರೆ ಮಾಡಿದವರು ಒತ್ತಾಯಿಸಿದ್ದಾರೆ ಎಂದು ವಿಷ್ಣು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.