ADVERTISEMENT

ಮಹಾರಾಷ್ಟ್ರ: ‘ಲಡ್ಕಿ ಬಹಿನಾ’ದಲ್ಲಿ ₹4,800 ಕೋಟಿ ವಂಚನೆ; ಸುಪ್ರಿಯಾ ಸುಳೆ ಆರೋಪ

​ಪ್ರಜಾವಾಣಿ ವಾರ್ತೆ
Published 29 ಜುಲೈ 2025, 14:11 IST
Last Updated 29 ಜುಲೈ 2025, 14:11 IST
ಸುಪ್ರಿಯಾ ಸುಳೆ
ಸುಪ್ರಿಯಾ ಸುಳೆ   

ಮುಂಬೈ: ಮಹಾರಾಷ್ಟ್ರದ ‘ಮುಖ್ಯಮಂತ್ರಿ ಲಡ್ಕಿ ಬಹಿನಾ’ ಯೋಜನೆಯಲ್ಲಿ ಅಕ್ರಮಗಳಾಗಿದ್ದು, ಸುಮಾರು ₹4,800 ಕೋಟಿ ವಂಚನೆ ನಡೆದಿದೆ ಎಂದು ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆಯೂ ಆಗಿರುವ ಸಂಸದೆ ಸುಪ್ರಿಯಾ ಸುಳೆ ಆರೋಪ ಮಾಡಿದ್ದಾರೆ. 

ಈ ಯೋಜನೆಯಡಿ ಅರ್ಹ ಫಲಾನುಭವಿಗಳಿಗೆ ಹಣ ನೇರ ವರ್ಗಾವಣೆ ಆಗಿದೆಯೇ ಎಂದು ಕೇಳಿರುವ ಅವರು, ಹಣ ವರ್ಗಾವಣೆ ಕಾರ್ಯವಿಧಾನದ ಪಾರದರ್ಶಕತೆಯನ್ನು ಪ್ರಶ್ನಿಸಿದ್ದಾರೆ.  

ಈ ವಂಚನೆ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್‌ಐಟಿ) ಸಮಗ್ರ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.  

ADVERTISEMENT

ಮಹಾರಾಷ್ಟ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಅದಿತಿ ತತ್ಕರೆ ಅವರು ಈ ಯೋಜನೆಯಡಿ 26.34 ಲಕ್ಷ ಜನರು ಅನರ್ಹರಾಗಿದ್ದು, ಅವರ ಜೂನ್‌ ಕಂತನ್ನು ತಡೆಹಿಡಿದಿರುವುದಾಗಿ ಇತ್ತೀಚೆಗೆ ಹೇಳಿದ್ದರು. ಅದರ ಬೆನ್ನಲ್ಲೇ ಸುಪ್ರಿಯಾ ಅವರು ಆರೋಪ ಮಾಡಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.