ADVERTISEMENT

ಹರಿಯಾಣದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆ

ಪಿಟಿಐ
Published 30 ಜುಲೈ 2022, 2:57 IST
Last Updated 30 ಜುಲೈ 2022, 2:57 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಶಿಮ್ಲಾ: ಹರಿಯಾಣದ ಸೋಲನ್ ಜಿಲ್ಲೆಯ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಪತ್ತೆಯಾಗಿದೆ ಎಂದು ಅಲ್ಲಿನ ರಾಜ್ಯ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಶಂಕಿತ ಮಂಕಿಪಾಕ್ಸ್ ವ್ಯಕ್ತಿಯ ಮಾದರಿಯನ್ನು ಪರೀಕ್ಷೆಗಾಗಿ ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿಗೆ (ಎನ್‌ಐವಿ) ರವಾನಿಸಲಾಗಿದೆ.

ಬದ್ದಿ ಪ್ರದೇಶದ ವ್ಯಕ್ತಿಯಲ್ಲಿ 21 ದಿನಗಳ ಹಿಂದೆ ಮಂಕಿಪಾಕ್ಸ್ ವೈರಾಣು ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ. ಅವರಿಗೆ ವಿದೇಶಿ ಪ್ರಯಾಣದ ಯಾವುದೇ ಹಿನ್ನೆಲೆಯಿಲ್ಲ. ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ.

ಮುನ್ನೆಚ್ಚರಿಕಾ ಕ್ರಮವಾಗಿ ಪತ್ಯೇಕವಾಸಲಿದ್ದು, ನಿಗಾ ವಹಿಸಲಾಗಿದೆ.

ದೇಶದಲ್ಲಿ ಇದುವರೆಗೆ ಮಂಕಿಪಾಕ್ಸ್‌ನ ನಾಲ್ಕು ಪ್ರಕರಣಗಳು (ಕೇರಳದಲ್ಲಿ ಮೂರು, ದೆಹಲಿಯಲ್ಲಿ ಒಂದು) ದಾಖಲಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.