ADVERTISEMENT

ತೆಲಂಗಾಣ: ಬೀದಿ ನಾಯಿಗಳ ಹತ್ಯೆಗೆ ಅರವಳಿಕೆ ಚುಚ್ಚುಮದ್ದು ಬಳಕೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 16:16 IST
Last Updated 9 ಫೆಬ್ರುವರಿ 2026, 16:16 IST
   

ಹೈದರಾಬಾದ್‌: ತೆಲಂಗಾಣದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಶ್ವಾನಗಳನ್ನು ಹತ್ಯೆಗೈಯ್ಯಲು ‘ಸಕ್ಸ್‌ಮೆಥೋನಿಯಮ್‌ ಕ್ಲೊರೈಡ್‌’ ಎಂಬ ಚುಚ್ಚುಮದ್ದನ್ನು ಬಳಸಲಾಗಿದೆ ಎಂದು ತೆಲಂಗಾಣ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. 

ಮನುಷ್ಯರನ್ನು ಶಸ್ತ್ರಚಿಕಿತ್ಸೆಗೆ ಒಳ‍ಪಡಿಸುವ ಮೊದಲು ಈ ಅರವಳಿಕೆ ಚುಚ್ಚುಮದ್ದನ್ನು ನೀಡಲಾಗುತ್ತದೆ ಹಾಗೂ ಪಶು ವೈದ್ಯರು ಕೂಡ ಪ್ರಾಣಿಗಳಿಗೆ ದಯಾಮರಣ ನೀಡುವ ಸಂದರ್ಭದಲ್ಲಿ ‘ಸಕ್ಸ್‌ಮೆಥೋನಿಯಮ್‌ ಕ್ಲೊರೈಡ್‌’ ಜತೆಗೆ ಬೇರೆ ಔಷಧಿಯನ್ನು ಮಿಶ್ರಣ ಮಾಡಿ ನೀಡುತ್ತಾರೆ ಎಂಬುದು ಇಲ್ಲಿ ಗಮನಾರ್ಹ. 

ರಾಜ್ಯದ ವಿವಿಧ ಗ್ರಾಮೀಣ ‍ಪ್ರದೇಶಗಳಲ್ಲಿ ಒಂದು ತಿಂಗಳಲ್ಲಿ 1 ಸಾವಿರ ಬೀದಿ ನಾಯಿಗಳನ್ನು ಹತ್ಯೆಗೈಯ್ಯಲಾಗಿತ್ತು. ಶ್ವಾನಗಳನ್ನು ಕೊಲ್ಲಲು ಗ್ರಾಮ ಪಂಚಾಯಿತಿ ನಾಯಕರೇ ಕೆಲವು ವ್ಯಕ್ತಿಗಳನ್ನು ನೇಮಿಸಿಕೊಂಡಿದ್ದರು ಎಂಬ ಆರೋಪವೂ ಕೇಳಿಬಂದಿತ್ತು. ಏತನ್ಮಧ್ಯೆ ಹತ್ಯೆಯಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಒಬ್ಬ ವ್ಯಕ್ತಿಯನ್ನೂ ಪೊಲೀಸರು ಬಂಧಿಸಿದ್ದಾರೆ.

ADVERTISEMENT

ಈ ಬೆಳವಣಿಗೆಗೆ ಸಂಬಂಧಿಸಿದಂತೆ ಸ್ಟ್ರೇ ಅನಿಮಲ್‌ ಫೌಂಡೇಷನ್‌ ಆಫ್‌ ಇಂಡಿಯಾದ (ಎಸ್‌ಎಎಫ್‌ಐ) ಅಧಿಕಾರಿ ಅದುಲಪುರಂ ಗೌತಮ್‌ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ‘ಬಂಧಿತ ವ್ಯಕ್ತಿಯಿಂದ ‍ಪೊಲೀಸರು  ‘ಸಕ್ಸ್‌ಮೆಥೋನಿಯಮ್‌ ಕ್ಲೊರೈಡ್‌’ ಚುಚ್ಚುಮದ್ದನ್ನು ಜಪ್ತಿ ಮಾಡಿಕೊಂಡಿದ್ದಾರೆ. ಈ ಕುರಿತಾದ ತನಿಖೆ ಮುಂದುವರಿಯುತ್ತಿದೆ. ಮತ್ತೊಂದೆಡೆ ಶ್ವಾನಗಳ ಸಾವಿಗೆ ನಿಖರ ಕಾರಣ ತಿಳಿಯಲು ವಿಧಿವಿಜ್ಞಾನ ವರದಿಗಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ’ ಎಂದೂ ಅವರು ತಿಳಿಸಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.