ADVERTISEMENT

ಮೇಕೆದಾಟು ಯೋಜನೆಗೆ ಹಣ ಮಂಜೂರು: ಕರ್ನಾಟಕ ನಿರ್ಧಾರದ ವಿರುದ್ಧ ತಮಿಳುನಾಡು ನಿರ್ಣಯ

ಪಿಟಿಐ
Published 21 ಮಾರ್ಚ್ 2022, 19:38 IST
Last Updated 21 ಮಾರ್ಚ್ 2022, 19:38 IST
   

ಚೆನ್ನೈ:ಕಾವೇರಿ ನದಿಗೆ ಅಡ್ಡಲಾಗಿಮೇಕೆದಾಟು ಬಳಿ ಅಣೆಕಟ್ಟು ನಿರ್ಮಿಸುವ ಕರ್ನಾಟಕ ಸರ್ಕಾರದ ಯೋಜನೆ ‘ಏಕಪಕ್ಷೀಯ’ವಾದದ್ದು ಎಂದು ಖಂಡಿಸಿರುವ ತಮಿಳುನಾಡು, ಈ ಕುರಿತು ವಿಧಾನಸಭೆಯಲ್ಲಿ ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ. ಅಲ್ಲದೆ ಈ ಯೋಜನೆ ಕುರಿತ ಕರ್ನಾಟಕ ಸರ್ಕಾರದ ಪ್ರಸ್ತಾವನೆಯನ್ನು ತಿರಸ್ಕರಿಸುವಂತೆ ಕೇಂದ್ರವನ್ನು ಆಗ್ರಹಿಸಿದೆ.

ಈ ಸಂಬಂಧ ನಿರ್ಣಯ ಮಂಡಿಸಿದ ಜಲಸಂಪನ್ಮೂಲ ಸಚಿವ ದೊರೈಮುರುಗನ್‌, ದಶಕಗಳಿಂದ ನೆರೆಯ ರಾಜ್ಯವು ತಮಿಳುನಾಡಿಗೆ ಸಮಸ್ಯೆ ಉಂಟು ಮಾಡುತ್ತಿದೆ. ಈಗ ಮೇಕೆದಾಟು ಬಳಿ ಅಣೆಕಟ್ಟು (ಸಮತೋಲನ ಜಲಾಶಯ) ಯೋಜನೆಯ ನಿರ್ಧಾರ ಕೈಗೊಳ್ಳುವ ಮೂಲಕ ಕರ್ನಾಟಕವು ಸುಪ್ರೀಂ ಕೋರ್ಟ್‌ ತೀರ್ಪಿಗೆ ಅಗೌರವ ತೋರಿದೆ ಎಂದು ಹೇಳಿದರು.

‘ದೇಶದಲ್ಲಿ ಸಂಯುಕ್ತ ವ್ಯವಸ್ಥೆ ಎಲ್ಲಿದೆ.ಸುಪ್ರೀಂ ಕೋರ್ಟ್ ಆದೇಶವನ್ನು ಧಿಕ್ಕರಿಸುವ ಮತ್ತು ತಮಿಳುನಾಡಿಗೆ ಪೂರ್ಣ ಪ್ರಮಾಣದ ನೀರನ್ನು ಹರಿಸದ ರಾಜ್ಯ ಇಲ್ಲಿದೆ. ನಾವು ಈಗ ಒಗ್ಗಟ್ಟಾಗಿ ಹೋರಾಟ ಮಾಡದಿದ್ದರೆ ನಮ್ಮ ಹಕ್ಕುಗಳನ್ನು ಕಳೆದುಕೊಳ್ಳುತ್ತೇವೆ. ಭವಿಷ್ಯದ ಪೀಳಿಗೆ ನಮ್ಮನ್ನು ಶಪಿಸಬಹುದು’ಎಂದ ಅವರು, ಪಕ್ಷಭೇದ ಮರೆತು ನಿರ್ಣಯವನ್ನು ಬೆಂಬಲಿಸುವಂತೆ ಮನವಿ ಮಾಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.