
ಸಾಂದರ್ಭಿಕ ಚಿತ್ರ
ರಾಮೇಶ್ವರಂ (ತಮಿಳುನಾಡು): ಶಾಲೆಗೆ ಹೋಗುತ್ತಿದ್ದ ಬಾಲಕಿಯನ್ನು ಚಾಕುವಿನಿಂದ ಇರುದು ಕೊಲೆ ಮಾಡಿದ ಆರೋಪದಡಿ 21 ವರ್ಷದ ಯುವಕನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
12ನೇ ತರಗತಿ ಓದುತ್ತಿದ್ದ ಬಾಲಕಿಗೆ ಆರೋಪಿಯು ಹಲವು ಬಾರಿ ಪ್ರೇಮ ನಿವೇದನೆ ಮಾಡಿದ್ದ. ಅದನ್ನು ನಿರಾಕರಿಸಿದ ಕಾರಣ ಬುಧವಾರ ಕೃತ್ಯವೆಸಗಿದ್ದಾನೆ ಎಂದು ಹೇಳಿದ್ದಾರೆ.
ಮೃತ ಬಾಲಕಿಯು ರಾಮೇಶ್ವರಂ ಸಮೀಪದ ಚೆರನ್‌ಕೊಟ್ಟೈ ಎಂಬಲ್ಲಿ ಕುಟುಂಬದ ಜೊತೆ ವಾಸವಿದ್ದಳು. ಆರೋಪಿಯನ್ನು, ಅದೇ ಪ್ರದೇಶದ ನಿವಾಸಿ ಮುನಿಯರಾಜ್ ಎಂದು ಗುರುತಿಸಲಾಗಿದೆ.
ಹಲವು ದಿನಗಳಿಂದ ಬಾಲಕಿಯನ್ನು ಹಿಂಬಾಲಿಸುತ್ತಿದ್ದ ಮುನಿಯರಾಜ್, ಆಕೆ ನಿರಾಕರಿಸಿದರೂ, ಮತ್ತೆ ಮತ್ತೆ ಒತ್ತಾಯಿಸುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ವೃತ್ತಿಯಲ್ಲಿ ಮೀನುಗಾರರಾಗಿರುವ ಬಾಲಕಿಯ ತಂದೆ ಮರಿಯಪ್ಪನ್ ಅವರು, ಇದೇ ವಿಚಾರವಾಗಿ ಆರೋಪಿಗೆ ಇತ್ತೀಚೆಗೆ ಎಚ್ಚರಿಕೆ ನೀಡಿದ್ದರು ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.