ನವದೆಹಲಿ: 2025–26ರ ಅಂದಾಜು ವರ್ಷಕ್ಕೆ ಸಂಬಂಧಿಸಿದಂತೆ, ಆದಾಯ ತೆರಿಗೆ ಲೆಕ್ಕಪತ್ರದ ವಿವರ ಸಲ್ಲಿಕೆಗೆ (ಐ.ಟಿ ರಿಟರ್ನ್ಸ್) ಇಲಾಖೆಯ ಎಲ್ಲಾ 7 ಮಾದರಿಯ ಅರ್ಜಿ ನಮೂನೆಗಳ ಅಧಿಸೂಚನೆ ಪ್ರಕಟಿಸಿದೆ.
ಸಣ್ಣ ಹಾಗೂ ಮಧ್ಯಮ ಕ್ರಮಾಂಕದ ತೆರಿಗೆ ಪಾವತಿದಾರರು ಐಟಿಆರ್ 1 ಹಾಗೂ 5ನೇ ಫಾರ್ಮ್ ಬಳಸಬೇಕು ಎಂದು ಏ.29ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. ಟ್ರಸ್ಟ್, ಚಾರಿಟಬಲ್ ಇನ್‌ಸ್ಟಿಟ್ಯೂಷನ್ ಸಂಸ್ಥೆಗಳು ಐಟಿಆರ್–7 ಬಳಸಬೇಕು ಎಂದು ಮೇ 11 ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.