ADVERTISEMENT

ಆಂಧ್ರ: ಟ್ರೋಲರ್‌ಗಳಿಗೆ, ಮಹಿಳಾ ಪೀಡಕರಿಗೆ ಸಿಎಂ ನಾಯ್ಡುರಿಂದ ರಾಜಾಶ್ರಯ– YSRCP

ಪಿಟಿಐ
Published 12 ಏಪ್ರಿಲ್ 2025, 5:39 IST
Last Updated 12 ಏಪ್ರಿಲ್ 2025, 5:39 IST
<div class="paragraphs"><p>ಚಂದ್ರಬಾಬು ನಾಯ್ಡು</p></div>

ಚಂದ್ರಬಾಬು ನಾಯ್ಡು

   

– ಪಿಟಿಐ

ಅಮರಾವತಿ: ಆಂಧ್ರಪ್ರದೇಶದಲ್ಲಿ ಆಡಳಿತಾರೂಢ ಟಿಡಿಪಿಯು ತನ್ನ ವಿರೋಧಿಗಳಿಗೆ ಆನ್‌ಲೈನಲ್ಲಿ ಟ್ರೋಲ್‌ ಪೇಜ್‌ಗಳ ಮೂಲಕ ನಿಂಧಿಸಿ ಮಾನಹಾನಿ ಮಾಡುವರಿಗೆ ಹಾಗೂ ಮಹಿಳಾ ಪೀಡಕರಿಗೆ ರಾಜಾಶ್ರಯ ಕಲ್ಪಿಸುತ್ತಿದೆ ಎಂದು ವಿರೋಧ ಪಕ್ಷವಾದ ವೈಎಸ್‌ಆರ್‌ ಕಾಂಗ್ರೆಸ್ ಪಾರ್ಟಿ ಆರೋಪಿಸಿದೆ.

ADVERTISEMENT

ವೈಎಸ್‌ಆರ್‌ ಕಾಂಗ್ರೆಸ್ ಪಾರ್ಟಿಯ ಮುಖಂಡರನ್ನು, ಕಾರ್ಯಕರ್ತರನ್ನು, ಸರ್ಕಾರದ ನಡೆಗಳನ್ನು ಪ್ರಶ್ನಿಸುವವರನ್ನು ಟಿಡಿಪಿ ಗುರಿಯಾಗಿಸುತ್ತಿದೆ. ಇದಕ್ಕೆ ಆನ್‌ಲೈನ್ ಟ್ರೋಲ್‌ ಪೇಜ್‌ಗಳನ್ನು ಬಳಸಿಕೊಳ್ಳುತ್ತಿದೆ. ಈ ಬಗ್ಗೆ ನಾವು ದೂರು ನೀಡಿದರೂ ಕ್ರಮ ವಹಿಸುತ್ತಿಲ್ಲ ಎಂದು ವೈಎಸ್‌ಆರ್‌ಸಿಪಿ ನಾಯಕಿ, ವಕ್ತಾರೆ ಶ್ಯಾಮಲಾ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದ್ದಾರೆ.

ನಮ್ಮ ಪಕ್ಷದ ನಾಯಕರು, ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅವರ ಪತ್ನಿಯನ್ನು ಗುರಿಯಾಗಿಸಿ ಟಿಡಿಪಿ ಕಾರ್ಯಕರ್ತ ಸಿ. ಕಿರಣ್ ಕುಮಾರ್ ಎನ್ನುವ ವ್ಯಕ್ತಿ ಆನ್‌ಲೈನ್‌ನಲ್ಲಿ ಮಾನಹಾನಿ ಮಾಡಿದ್ದಾನೆ. ಈ ಬಗ್ಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಂಡಿದಲ್ಲ, ಸಿಎಂ ಚಂದ್ರಬಾಬು ನಾಯ್ಡು ಹಾಗೂ ಅವರ ಮಗ ನಾರಾ ಲೋಕೇಶ್ ಅವರ ಕುಮ್ಮಕ್ಕಿನಿಂದಲೇ ಇದೆಲ್ಲ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುಂಟೂರು ಎಸ್‌ಪಿ ಆರೋಪಿಯನ್ನು ವಶಕ್ಕೆ ಪಡೆದಿದ್ದೇವೆ ಎಂದು ಹೇಳುತ್ತಾರೆ. ಆದರೆ, ಇನ್ನೂ ಆತನನ್ನು ಬಂಧಿಸಿ ಪ್ರಕರಣ ದಾಖಲಿಸಿಲ್ಲ ಏಕೆ? ಎಂದು ಪ್ರಶ್ನಿಸಿದ್ದಾರೆ.

ಗೃಹ ಸಚಿವೆ ವಂಗಾಲಪುಡಿ ಅನಿತಾ ಅವರೂ ಸಹ ಇದರ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ. ರಾಜ್ಯದಲ್ಲಿ ಇಷ್ಟೇಲ್ಲ ನಡೆಯುತ್ತಿದ್ದರೂ ಪೊಲೀಸ್ ಅಧಿಕಾರಿಗಳೂ ಸುಮ್ಮನಿದ್ದಾರೆ. ಸಿಎಂ ಹಾಗೂ ಅವರ ಮಗ ಇಂಥವರಿಗೆ ಆಶ್ರಯ ನೀಡುತ್ತಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.