ADVERTISEMENT

ಉತ್ತರ ಪ್ರದೇಶ| ಮೊಬೈಲ್ ಜಾಸ್ತಿ ಬಳಸಬೇಡ ಎಂದು ಬೈದ ಅಮ್ಮ: ಸಾವಿಗೆ ಶರಣಾದ ಮಗಳು

ಪಿಟಿಐ
Published 16 ಮೇ 2025, 15:25 IST
Last Updated 16 ಮೇ 2025, 15:25 IST
   

ಬಲ್ಲಿಯಾ: ಜಾಸ್ತಿ ಮೊಬೈಲ್ ಬಳಸಬೇಡ ಎಂದು ಅಮ್ಮ ಗದರಿದಕ್ಕೆ, ವಿಷ ಕುಡಿದು ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯು ಉತ್ತರಪ್ರದೇಶದ ಸಿಕಂದರ್‌ಪುರ ಬಳಿ ಶುಕ್ರವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಿರಂತರವಾಗಿ ಮೊಬೈಲ್ ಬಳಕೆ ಮಾಡಬೇಡ ಎಂದು ತಾಯಿ ಹೇಳಿದಕ್ಕೆ, ಮನನೊಂದು ಮನೆಯ ಬಳಿಯಿದ್ದ ಕಾಲುವೆ ಬಳಿ ವಿಷ ಸೇವಿಸಿ ಅರತಿ ಗೊಂಡ್(17) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಗಸ್ತು ತಿರುಗುತ್ತಿದ್ದ ಪೊಲೀಸರು, ಅನುಮಾನಾಸ್ಪದ ವ್ಯಕ್ತಿಯನ್ನು ಕಂಡು, ಹತ್ತಿರ ತೆರಳಿದಾಗ ಬಾಲಕಿಯು ಪ್ರಜ್ಞೆ ತಪ್ಪಿರುವುದು ಗೊತ್ತಾಗಿ, ಸ್ಥಳಿಯ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ನಂತರ, ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ಸೇರಿಸಿದಾಗ, ಚಿಕಿತ್ಸೆಯ ವೇಳೆಯೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿ ಪ್ರವೀಣ್ ಸಿಂಗ್ ಮಾಹಿತಿ ನೀಡಿದರು.

ADVERTISEMENT

ಮರಣೋತ್ತರ ಪರೀಕ್ಷೆಗೆ ಶವವನ್ನು ಕಳಿಸಲಾಗಿದೆ. ಹೆಚ್ಚಿನ ತನಿಖೆ ಮಾಡಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.