ADVERTISEMENT

ನನ್ನ ಹಿಂದೂ ಪತ್ನಿಯನ್ನು ಮುಟ್ಟಿದ್ದೇನೆ, ನೀವು ಏನು ಮಾಡಬಹುದು? ತೆಹಸೀನ್‌

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 9:49 IST
Last Updated 30 ಜನವರಿ 2019, 9:49 IST
ತೆಹಸೀನ್‌ ಪೂನಾವಾಲ ಮತ್ತು ಪತ್ನಿ
ತೆಹಸೀನ್‌ ಪೂನಾವಾಲ ಮತ್ತು ಪತ್ನಿ   

ಬೆಂಗಳೂರು:ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯ ಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು ಎಂಬ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಹೇಳಿಕೆಗೆ ಟಾಂಗ್ಕೊಟ್ಟಿರುವತೆಹಸೀನ್‌ ಪೂನಾವಾಲ ಎಂಬುವರು ತಮ್ಮ ಹಿಂದೂ ಪತ್ನಿಯನ್ನು ತಬ್ಬಿಕೊಂಡಿರುವಚಿತ್ರವನ್ನು ಟ್ವೀಟ್‌ ಮಾಡಿದ್ದಾರೆ.

ತೆಹಸೀನ್‌ ಪೂನಾವಾಲ ಎಂಬುವರು ಟ್ವಿಟರ್‌ನಲ್ಲಿ ತಮ್ಮ ಹಿಂದೂ ಪತ್ನಿಯನ್ನು ತಬ್ಬಿಕೊಂಡಿರುವ ಪೋಟೊವನ್ನು ಪೋಸ್ಟ್‌ ಮಾಡಿ, ನಮಸ್ಕಾರಗಳು@AnantkumarH, ನನ್ನ ಕೈಗಳು ನನ್ನ ಹಿಂದೂ ಪತ್ನಿಯನ್ನು ಹಿಡಿದಿವೆ ನೋಡಿ, ಈಗ ನೀವು ಏನು ಮಾಡಬಹುದು? ಇದು ಸರ್‌ ಧೈರ್ಯ!! ಎಂದು ಟ್ವೀಟ್ ಮಾಡಿದ್ದಾರೆ.

ಸಚಿವರೇ, ಈಗ ನೀವು ಏನು ಮಾಡಬಹುದು? ಇದು ಸರ್‌ ಧೈರ್ಯ!! ಎಂದು ಟಾಂಗ್‌ ಕೊಡುವ ಮೂಲಕ ಸಚಿವರ ಹೇಳಿಕೆಯನ್ನುತೆಹಸೀನ್‌ ಪೂನಾವಾಲ ಖಂಡಿಸಿದ್ದಾರೆ.

ADVERTISEMENT

ಕೊಡಗು ಜಿಲ್ಲೆಯ ಸುಂಟಿಕೊಪ್ಪದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಸಿ ಮಾತನಾಡಿದ್ದ ಸಚಿವರು‘ಹಿಂದೂ ಸಮಾಜದ ಹೆಣ್ಣು ಮಕ್ಕಳನ್ನು ಅನ್ಯಧರ್ಮದ ಯುವಕರು ಮುಟ್ಟಿದರೆ ಅವರ ಕೈ ಇರಬಾರದು. ಹಿಂದೂ ಸಂಘಟನೆಯ ಕಾರ್ಯಕರ್ತರು ಅಂಥವರ ಕೈತೆಗೆದು ಇತಿಹಾಸ ನಿರ್ಮಿಸಬೇಕು’ ಎಂದು ಹೇಳಿದ್ದರು.ಅನಂತಕುಮಾರ ಹೆಗಡೆ ಅವರ ಈ ವಿವಾದಾತ್ಮಕ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿತ್ತು.

ತೆಹಸೀನ್‌ ಪೂನಾವಾಲ ಮಾತ್ರವಲ್ಲದೆ, ಪ್ರಗತಿಪರರು, ರಾಜಕಾರಣಿ ಸಚಿವರ ವಿವಾದಿತ ಹೇಳಿಕೆಯನ್ನು ಖಂಡಿಸಿದ್ದಾರೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಅವರು ಕೇಂದ್ರ ಸಚಿವರ ವಿವಾದಾತ್ಮಕ ಹೇಳಿಕೆಯನ್ನು ಹಂಚಿಕೊಂಡು, ‘ಸಂಸದರಾಗಿ ನಿಮ್ಮ ಸಾಧನೆ ಏನು’ ಎಂದು ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಸಿದ್ದ ಅನಂತಕುಮಾರ ಹೆಗಡೆ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿ ಟ್ವೀಟ್‌ ಮಾಡಿದ್ದರು.

ಪುನಃ ಹೆಗಡೆ ಟ್ವೀಟ್‌ಗೆ ದಿನೇಶ್‌ ಪ್ರತಿಕ್ರಿಯಿಸಿ, ’ಇದು ಅವರಲ್ಲಿನ ಸಂಸ್ಕೃತಿಯ ಅಭಾವವನ್ನು ತೋರುತ್ತದೆ..’ ಎಂದು ಟ್ವೀಟ್‌ ಮೂಲಕ ಉತ್ತರಿಸಿದ್ದರು.

ದಿನೇಶ್‌ ಗುಂಡೂರಾವ್‌ ಅವರನ್ನು ‘ಮುಸ್ಲಿಂ ಹೆಂಗಸಿನ ಹಿಂದೆ ಓಡಿ ಹೋದವನು...’ ಎಂದೆಲ್ಲ ಹೀಯಾಳಿಸಿ ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮಾಡಿರುವ ಟ್ವೀಟ್‌ಗೆ ದಿನೇಶ್‌ಅವರ ಪತ್ನಿ ತಬು ರಾವ್‌ ಖಾರವಾಗಿ ಪ್ರತಿಕ್ರಿಯಿಸಿದ್ದರು.

ಹೈದರಾಬಾದ್‌ ಸಂಸದ ಹಾಗೂ ಆಲ್ ಇಂಡಿಯಾ ಮಜ್ಲಿಸ್-ಎ-ಇತ್ತೇಹಾದುಲ್ ಮುಸ್ಲಿಮೀನ್ (ಎಐಎಂಐಎಂ) ಅಧ್ಯಕ್ಷ ಅಸಾದುದ್ದೀನ್ ಒವೈಸಿ,ಕೌಶಲ್ಯ ಅಭಿವೃದ್ಧಿ ಸಚಿವರು, ಜನರಿಗೆ ಕೈ ಕತ್ತರಿಸು, ಕೊಲ್ಲು ಎಂದು ಹೇಳುವುದಕ್ಕೆ ಮಾತ್ರತಮ್ಮ ಕೌಶಲ್ಯವನ್ನು ಬಳಕೆ ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.