ADVERTISEMENT

ಗಾಲ್ವನ್ ಕಣಿವೆ ಹುತಾತ್ಮ ಕರ್ನಲ್ ಸಂತೋಷ್ ಬಾಬು ಪತ್ನಿ ಜಿಲ್ಲಾಧಿಕಾರಿ ಆಗಿ ನೇಮಕ

ಪಿಟಿಐ
Published 24 ಜುಲೈ 2020, 0:47 IST
Last Updated 24 ಜುಲೈ 2020, 0:47 IST
ಕರ್ನಲ್ ಸಂತೋಷ್ ಬಾಬು
ಕರ್ನಲ್ ಸಂತೋಷ್ ಬಾಬು   

ಹೈದರಾಬಾದ್‌:ಭಾರತ–ಚೀನಾ ವಾಸ್ತವ ಗಡಿ ರೇಖೆಯಲ್ಲಿ ನಡೆದ ಹಿಂಸಾತ್ಮಕ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಅವರ ಪತ್ನಿ ಸಂತೋಷಿ ಅವರನ್ನು ತೆಲಂಗಾಣ ಸರ್ಕಾರ ಜಿಲ್ಲಾಧಿಕಾರಿಯಾಗಿನೇಮಕ ಮಾಡಿದೆ.

ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರಗತಿ ಭವನದಲ್ಲಿ ಸಂತೋಷಿ ಅವರಿಗೆ ಬುಧವಾರ ನೇಮಕಾತಿ ಪತ್ರವನ್ನು ಹಸ್ತಾಂತರಿಸಿದ್ದಾರೆ’ ಎಂದು ಅಧಿಕೃತ ಮಾಹಿತಿ ತಿಳಿಸಿದೆ.

ಸಂತೋಷಿ ಅವರನ್ನು ಹೈದರಾಬಾದ್‌ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹುದ್ದೆಗೆ ನಿಯೋಜಿಸುವಂತೆ ಅಧಿಕಾರಿಗಳಿಗೆ ಮುಖ್ಯಮಂತ್ರಿ ಸೂಚಿಸಿದ್ದಾರೆ. ಸಂತೋಷಿ ಅವರು ಸೂಕ್ತ ತರಬೇತಿ ಪಡೆದು ಉದ್ಯೋಗದಲ್ಲಿ ಪರಿಣತಿ ಪಡೆಯುವವರೆಗೂ ಅವರಿಗೆ ನೆರವಾಗುವಂತೆ ಮುಖ್ಯಮಂತ್ರಿ ಅವರ ಕಾರ್ಯದರ್ಶಿ ಸ್ಮಿತಾಸಬರವಾಲ್‌ ಅವರಿಗೆ ತಿಳಿಸಿದ್ದಾರೆ.

ADVERTISEMENT

ಪ್ರಗತಿ ಭವನದಲ್ಲಿಯೇ ಸಂತೋಷಿ ಅವರ ಕುಟುಂಬದ 20 ಸದಸ್ಯರೊಂದಿಗೆ ರಾವ್, ಮಧ್ಯಾಹ್ನದ‌ ಊಟ ಮಾಡಿದರು.ಕರ್ನಲ್ ಸಂತೋಷ್ ಬಾಬು ಅವರ ಕುಟುಂಬದ ಜೊತೆಗೆ ಸರ್ಕಾರ ಯಾವಾಗಲೂ ಇರಲಿದೆ ಎಂದು ಅವರು ಭರವಸೆ ನೀಡಿದರು.

ಈ ಹಿಂದೆ, ಜಿಲ್ಲಾಧಿಕಾರಿ ಶ್ವೇತಾ ಮೊಹಂತಿ ಮತ್ತು ಟಿಆರ್‌ಎಸ್‌ ಶಾಸಕ ಗದರಿ ಕಿಶೋರ್ ಕುಮಾರ್ ಅವರುಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿರುವ 711 ಚದರ ಯಾರ್ಡ್‌ ನಿವೇಶನದ ದಾಖಲೆಗಳನ್ನು ಸಂತೋಷಿ ಅವರಿಗೆ ನೀಡಿದ್ದರು.

ಕಳೆದ ಜೂನ್‌ 22ರಂದುಕರ್ನಲ್ ಸಂತೋಷ್ ಬಾಬು ಅವರ ಕುಟುಂಬಕ್ಕೆ ಪರಿಹಾರ ರೂಪದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ₹ 5 ಕೋಟಿ ಮೊತ್ತದ ಚೆಕ್ ವಿತರಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.