ಹೈದರಾಬಾದ್: ತಂದೆ ಐಷಾರಾಮಿ ಕಾರು ಕೊಡಿಸಲಿಲ್ಲ ಎಂದು 21 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಸಿದ್ದಿಪೇಟ್ ಜಿಲ್ಲೆಯಲ್ಲಿ ನಡೆದಿದೆ. ಯುವಕನ ತಂದೆ ಕೃಷಿ ಕಾರ್ಮಿಕರಾಗಿದ್ದು, ಐಷಾರಾಮಿ ಕಾರು ಖರೀದಿಸಲು ಸಶಕ್ತರಾಗಿರಲಿಲ್ಲ.
ಜಮೀನಿಗೆ ತೆರಳಿದ ಯುವಕ ಅಲ್ಲಿ ಕೀಟನಾಶಕ ಸೇವಿಸಿ, ಬಳಿಕ ಮನೆಗೆ ಬಂದು ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಆಸ್ಪತ್ರೆಗೆ ದಾಖಲಿಸಿದ ಬಳಿಕ ಶನಿವಾರ ಆತ ಮೃತಪಟ್ಟನು.
ವಿದ್ಯಾಭ್ಯಾಸವನ್ನು ಮೊಟಕುಗೊಳಿಸಿದ್ದ ಯುವಕ, ಮದ್ಯವ್ಯಸನಿಯಾಗಿದ್ದ. ಐಷಾರಾಮಿ ಕಾರು ಹಾಗೂ ಮನೆಗಾಗಿ ಪೋಷಕರೊಂದಿಗೆ ಜಗಳವಾಡುತ್ತಿದ್ದ. ಬೇರೊಂದು ಕಾರು ಕೊಡಿಸಲು ಪೋಷಕರು ಮುಂದಾಗಿದ್ದರೂ ಆತ ಅದನ್ನು ನಿರಾಕರಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.