ತಿರುವನಂತಪುರ: ದೇವಸ್ಥಾನ ಪ್ರವೇಶಿಸುವ ಮುನ್ನ ಪುರುಷ ಭಕ್ತರು ತಮ್ಮ ಮೇಲಂಗಿಯನ್ನು ತೆಗೆಯಬೇಕು ಎಂಬ ನಿಯಮವನ್ನು ಕೈಬಿಡಲು ಕೇರಳದ ದೇಗುಲ ಆಡಳಿತ ಮಂಡಳಿಯೊಂದು ಯೋಜನೆ ರೂಪಿಸಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಬುಧವಾರ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಪಿಣರಾಯಿ ಅವರು, ‘ದೇವಾಲಯ ಆಡಳಿತ ಮಂಡಳಿಯ ಪ್ರತಿನಿಧಿಯೊಬ್ಬರನ್ನೂ ಇಂದು ಭೇಟಿಯಾದೆ. ಈ ನಿರ್ಧಾರ ಕೈಗೊಳ್ಳುವುದಾಗಿ ಅವರು ತಿಳಿಸಿದರು. ಇದು ಒಳ್ಳೆಯ ನಿರ್ಧಾರ, ಒಳ್ಳೆಯ ಸಲಹೆ’ ಎಂದು ಹೇಳಿದರು.
ಆದರೆ, ಯಾವ ದೇಗುಲ ಆಡಳಿತ ಮಂಡಳಿಯ ಯೋಜನೆ ಇದು ಎಂದು ಅವರು ಸ್ಪಷ್ಟಪಡಿಸಿಲ್ಲ.
ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರು ಸ್ಥಾಪಿಸಿರುವ ಶಿವಗಿರಿ ಮಠದ ಸ್ವಾಮಿ ಸಚ್ಚಿದಾನಂದ ಅವರ ಹೇಳಿಕೆ ಬೆನ್ನಲ್ಲೇ ಮಂಡಳಿಯು ಈ ನಿರ್ಧಾರಕ್ಕೆ ಮುಂದಾಗಿದೆ.
ಸ್ವಾಮೀಜಿ ಅವರು ‘ಈ ಪದ್ಧತಿಯು ಸಾಮಾಜಿಕ ಪಿಡುಗು. ಇದನ್ನು ಕೊನೆಗೊಳಿಸಬೇಕು’ ಎಂದು ಮಂಗಳವಾರ ಕರೆ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.