ADVERTISEMENT

Terror Attack: ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ದಿನಪತ್ರಿಕೆಗಳು

ಪಿಟಿಐ
Published 23 ಏಪ್ರಿಲ್ 2025, 6:21 IST
Last Updated 23 ಏಪ್ರಿಲ್ 2025, 6:21 IST
<div class="paragraphs"><p>ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ಪ್ರಮುಖ ದಿನಪತ್ರಿಕೆಗಳು</p></div>

ಕಪ್ಪು ಬಣ್ಣದಲ್ಲಿ ಮುಖಪುಟ ಮುದ್ರಿಸಿದ ಕಾಶ್ಮೀರದ ಪ್ರಮುಖ ದಿನಪತ್ರಿಕೆಗಳು

   

ಪಿಟಿಐ ಚಿತ್ರ

ಶ್ರೀನಗರ: ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 28 ಜನ ಮೃತಪಟ್ಟಿದ್ದು, ಇಡೀ ದೇಶ ಬೆಚ್ಚಿಬಿದ್ದಿದೆ. ಈ ಕೃತ್ಯವನ್ನು ಖಂಡಿಸಿ ಕಾಶ್ಮೀರದ ಹಲವು ಪ್ರಮುಖ ಪತ್ರಿಕೆಗಳು ಮುಖಪುಟವನ್ನು ಕಪ್ಪು ಬಣ್ಣದಲ್ಲಿ ಮುದ್ರಿಸಿವೆ. 

ADVERTISEMENT

ಕಪ್ಪು ಬಣ್ಣದ ಮುಖಪುಟದಲ್ಲಿ ಬಿಳಿ ಮತ್ತು ಕೆಂಪು ಬಣ್ಣದ ಮುಖ್ಯಾಂಶ ಮತ್ತು ತಲೆಬರಹವನ್ನು ನೀಡಿವೆ. ಇದು ಅಮಾನವೀಯ ಕೃತ್ಯದ ಬಗ್ಗೆ ನಿವಾಸಿಗಳು ಮತ್ತು ಮಾಧ್ಯಮಗಳ ದುಃಖವನ್ನು ಸಂಕೇತಿಸುತ್ತದೆ ಎನ್ನಲಾಗಿದೆ.

ಗ್ರೇಟರ್ ಕಾಶ್ಮೀರ್, ರೈಸಿಂಗ್ ಕಾಶ್ಮೀರ್, ಕಾಶ್ಮೀರ್ ಉಜ್ಮಾ, ಅಫ್ತಾಬ್ ಮತ್ತು ತೈಮೀಲ್ ಇರ್ಷಾದ್ ಸೇರಿದಂತೆ ಪ್ರಮುಖ ಇಂಗ್ಲಿಷ್ ಮತ್ತು ಉರ್ದು ದಿನಪತ್ರಿಕೆಗಳ ಸ್ವರೂಪದಲ್ಲಿನ ಬದಲಾವಣೆಯು, ಈ ಪ್ರದೇಶವನ್ನು ದಶಕಗಳಿಂದ ಪೀಡಿಸುತ್ತಿರುವ ಹಿಂಸಾಚಾರವನ್ನು ನೆನಪಿಸುವಂತಿದೆ.

ಭಯೋತ್ಪಾದಕರು ಕಾಲ್ನಡಿಗೆ ಅಥವಾ ಕುದುರೆ ಮೂಲಕ ಮಾತ್ರ ಹೆಚ್ಚಿನ ಜನದಟ್ಟಣೆಯ ಪ್ರವಾಸಿ ತಾಣವನ್ನು ಪ್ರವೇಶಿಸಿ ದಾಳಿ ಮಾಡಬಹುದು ಎಂಬ ಅಂಶವನ್ನು ಎತ್ತಿ ತೋರಿಸಿವೆ. ಇಂತಹ ಭೀಕರ ಘಟನೆಗಳು ಮರುಕಳಿಸದಂತೆ ತಡೆಯಲು ಜಾಗರೂಕತೆ, ಸಮುದಾಯಗಳು ತೊಡಗಿಸಿಕೊಳ್ಳುವಿಕೆ ಮತ್ತು ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತೊಗೆಯುವುದೇ ಮಾರ್ಗವಾಗಿದೆ ಎಂದು ಒತ್ತಾಯಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.