
ನವದೆಹಲಿ: ಅಂತರರಾಜ್ಯ ಭಯೋತ್ಪಾದಕರ ಜಾಲವನ್ನು ಭೇದಿಸಿದ ನಂತರ ಬಂಧಿಸಲಾದ ಎಂಟು ಮಂದಿಯಲ್ಲಿ ಒಬ್ಬರಾದ ವೈದ್ಯೆಗೆ ಜಮಾತ್–ಉಲ್–ಮೊಮಿನಾತ್ ಸಂಘಟನೆಯ ನಂಟಿದೆ ಎಂಬುದು ತನಿಖೆಯಲ್ಲಿ ಗೊತ್ತಾಗಿದೆ.
ಫರಿದಾಬಾದ್‌ನ ಅಲ್–ಫಲಾಹ್ ವಿಶ್ವವಿದ್ಯಾಲಯದ ಡಾ. ಶಾಹೀನ್ ಸಯೀದ್ ಅವರನ್ನು ಶ್ರೀನಗರಕ್ಕೆ ಕರೆದೊಯ್ದು ಸೋಮವಾರ ಬಂಧಿಸಲಾಗಿತ್ತು.
ನಿಷೇಧಿತ ಜೈಷ್–ಎ–ಮೊಹಮ್ಮದ್ (ಜೆಎಂಎಂ) ಸಂಘಟನೆಯು ಕಳೆದ ತಿಂಗಳಷ್ಟೇ ಜಮಾತ್–ಉಲ್–ಮೊಮಿನಾತ್ ಮಹಿಳಾ ಘಟಕ ಆರಂಭಿಸಿದೆ.
ಶಾಹೀನ್, ಮಹಿಳಾ ಘಟಕದ ನೇಮಕಾತಿ ವಿಭಾಗದಲ್ಲಿದ್ದರು. ಭಯೋತ್ಪಾದಕ ಚಟುವಟಿಕೆಗಳಿಗೆ ಹೆಚ್ಚು ಹೆಚ್ಚು ಮಹಿಳೆಯರನ್ನು ನೇಮಿಸಿಕೊಳ್ಳಲು ಪಾಕಿಸ್ತಾನದ ಹ್ಯಾಂಡ್ಲರ್‌ನೊಂದಿಗೆ ಸಂಪರ್ಕದಲ್ಲಿದ್ದಾರೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
‘ಮಗಳು ಭಯೋತ್ಪಾದಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬಗ್ಗೆ ನನಗೇನೂ ಗೊತ್ತಿಲ್ಲ. ಮಾಧ್ಯಮಗಳ ಮೂಲಕವಷ್ಟೇ ಆಕೆಯ ಬಂಧನದ ಬಗ್ಗೆ ಗೊತ್ತಾಗಿದೆ’ ಎಂದು ಶಾಹೀನ್ ತಂದೆ ಲಖನೌನಲ್ಲಿ ಪ್ರತಿಕ್ರಿಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.