ADVERTISEMENT

‘ಮುಸ್ಲಿಮರ ಕ್ಷಮೆ ಕೋರಬೇಕು’: ಪೊಲೀಸ್‌ ಠಾಣೆ ವೆಬ್‌ಸೈಟ್‌ ಹ್ಯಾಕ್‌ ಮಾಡಿ ಸಂದೇಶ

ಪಿಟಿಐ
Published 14 ಜೂನ್ 2022, 13:59 IST
Last Updated 14 ಜೂನ್ 2022, 13:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ಮಹಾರಾಷ್ಟ್ರದ ಠಾಣೆಯ ಪೊಲೀಸ್‌ ವೆಬ್‌ಸೈಟ್‌ ಅನ್ನು ಅಪರಿಚಿತರು ಹ್ಯಾಕ್‌ ಮಾಡಿದ್ದು, ‘ಜಗತ್ತಿನಾದ್ಯಂತ ಇರುವ ಮುಸ್ಲಿಮರ ಕ್ಷಮೆ ಕೋರಬೇಕು’ ಎಂಬ ಸಂದೇಶವನ್ನು ಅಪ್‌ಲೋಡ್‌ ಮಾಡಿದ್ದಾರೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

‘ಒನ್‌ ಹ್ಯಾಟ್ ಸೈಬರ್‌ ಟೀಮ್‌’ ಹೆಸರಿನ ಹ್ಯಾಕರ್‌ಗಳು ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡಿದ್ದಾರೆ. ಮಧ್ಯಾಹ್ನದ ವೇಳೆಗೆ ಅದನ್ನು ಪುನಃಸ್ಥಾಪಿಸಲಾಗಿದೆ ಮತ್ತು ಈ ಸಂಬಂಧ ಅಪರಿಚಿತರ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ ಎಂದೂ ಹೇಳಿದ್ದಾರೆ.

ಕೆಲ ದಿನಗಳಿಂದ ಭಾರತದ ಹಲವು ವೆಬ್‌ಸೈಟ್‌ಗಳು ಹ್ಯಾಕ್‌ ಆಗಿವೆ. ಇಂಡೊನೇಷ್ಯಾ ಮತ್ತು ಮಲೇಷ್ಯಾದ ಹ್ಯಾಕರ್‌ಗಳು ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.