
ದಿ ಕೇರಳ ಸ್ಟೋರಿ
ಕೊಚ್ಚಿ: ‘ದಿ ಕೇರಳ ಸ್ಟೋರಿ–2’ ಬಿಡುಗಡೆಗೂ ಮುನ್ನವೇ ವಿರೋಧ ವ್ಯಕ್ತಪಡಿಸುತ್ತಿರುವುದು ಆತುರ ಹಾಗೂ ತಪ್ಪುಕಲ್ಪನೆಯಾಗಿದೆ’ ಎಂದು ಇಲ್ಲಿನ ಹೈಕೋರ್ಟ್‌ಗೆ ನಿರ್ಮಾಪಕ ವಿಪುಲ್ ಅಮಿತ್ ಶಾ ತಿಳಿಸಿದ್ದಾರೆ.
ಹೈಕೋರ್ಟ್‌ಗೆ ಮಂಗಳವಾರ ಪ್ರಮಾಣಪತ್ರ ಸಲ್ಲಿಸಿದ್ದು, ಅರ್ಜಿ ಸಲ್ಲಿಸುವ 16 ದಿನಗಳ ಮೊದಲೇ ಪ್ರಮಾಣಪತ್ರ ಸಲ್ಲಿಸಲಾಗಿದೆ. ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬೆಚು ಕುರಿಯನ್, ‘ಸಾಮಾನ್ಯವಾಗಿ ಕಲಾತ್ಮಕ ಅಭಿವ್ಯಕ್ತಿ ಯಲ್ಲಿ ಹಸ್ತಕ್ಷೇಪ ನಡೆಸಲು ನ್ಯಾಯಾಲಯ ಇಷ್ಟಪಡುವುದಿಲ್ಲ. ರಾಜ್ಯದ ಜನರ ಕುರಿತಾಗಿ ಎದ್ದಿರುವ ಕಳಕಳಿಯನ್ನು ತಳ್ಳಿಹಾಕುವಂತಿಲ್ಲ’ ಎಂದು ತಿಳಿಸಿದರು.
‘ಆರ್ಥಿಕ ಲಾಭ ಪಡೆಯುವ ಉದ್ದೇಶದಿಂದ ಸಿನಮಾವು ದುರುದ್ದೇಶಪೂರ್ವಕ ಅಂಶಗಳನ್ನು ಹೊಂದಿದೆ. ಸಿನಿಮಾಕ್ಕೆ ನೀಡಿದ ಪ್ರಮಾಣಪತ್ರ ತಡೆ ನೀಡಬೇಕು’ ಎಂದು ಕಣ್ಣವಾಂನ ಶ್ರೀ ದೇವ್ ನಂಬೂದರಿ ಅರ್ಜಿ ಸಲ್ಲಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.