ADVERTISEMENT

ಭ್ರಷ್ಟರನ್ನು ರಕ್ಷಿಸಲು ಭ್ರಷ್ಟ ಪಕ್ಷಗಳು ಒಂದಾಗಿವೆ: ಉ.ಪ್ರದೇಶ ಸಚಿವ

ಪಿಟಿಐ
Published 2 ಏಪ್ರಿಲ್ 2024, 12:10 IST
Last Updated 2 ಏಪ್ರಿಲ್ 2024, 12:10 IST
<div class="paragraphs"><p>ಉತ್ತರ ಪ್ರದೇಶದ ಅಬಕಾರಿ ಸಚಿವ ನಿತಿನ್‌ ಅಗರವಾಲ್‌</p></div>

ಉತ್ತರ ಪ್ರದೇಶದ ಅಬಕಾರಿ ಸಚಿವ ನಿತಿನ್‌ ಅಗರವಾಲ್‌

   

ಚಿತ್ರ ಕೃಪೆ: ಎಕ್ಸ್‌ @nitinagarwal_n

ನೋಯ್ಡಾ: ಭ್ರಷ್ಟರನ್ನು ಸಮರ್ಥಿಸಿಕೊಳ್ಳಲು 'ಇಂಡಿಯಾ' ಮೈತ್ರಿಕೂಟದ ಭ್ರಷ್ಟ ಪಕ್ಷಗಳು ಒಂದಾಗಿವೆ ಎಂದು ಉತ್ತರ ಪ್ರದೇಶದ ಅಬಕಾರಿ ಸಚಿವ ನಿತಿನ್‌ ಅಗರವಾಲ್‌ ಟೀಕಿಸಿದ್ದಾರೆ.

ADVERTISEMENT

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಎರಡು ದಿನಗಳ ಹಿಂದೆ ದೆಹಲಿಯ ರಾಮಲೀಲಾ ಮೈದಾನದಲ್ಲಿ ‘ಇಂಡಿಯಾ’ ಮೈತ್ರಿಕೂಟ ರ್‍ಯಾಲಿಯನ್ನು ಆಯೋಜಿಸಿತ್ತು. ಇದು ಭ್ರಷ್ಟರನ್ನು ರಕ್ಷಿಸುವ ರ್‍ಯಾಲಿಯಾಗಿದೆ. ಅವರು ತಮ್ಮ ಭ್ರಷ್ಟಾಚಾರವನ್ನು ಸಮರ್ಥಿಸಿಕೊಳ್ಳಲು ಸಾರ್ವಜನಿಕ ಸಭೆಯನ್ನು ಆಯೋಜಿಸಿದ್ದರು ಎಂದು ವಾಗ್ದಾಳಿ ನಡೆಸಿದ್ದಾರೆ.

‘ಇಂಡಿಯಾ’ ಮೈತ್ರಿಕೂಟವನ್ನು ಮುನ್ನಡೆಸುತ್ತಿರುವ ಪ್ರಮುಖ ವಿರೋಧ ಪಕ್ಷವಾಗಿರುವ ಕಾಂಗ್ರೆಸ್‌ ಈ ಹಿಂದೆ ಭ್ರಷ್ಟಾಚಾರದಲ್ಲಿ ತೊಡಗಿತ್ತು. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಾರಂಭವಾದ ಪಕ್ಷ ಎಎಪಿ ಈಗ ಅತ್ಯಂತ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ’ ಎಂದು ಅಗರವಾಲ್‌ ಆರೋಪಿಸಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಅವರಿಗೆ ಅಬಕಾರಿ ನೀತಿ ಹಗರಣದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ಹಲವು ಸಮನ್ಸ್‌ಗಳನ್ನು ನೀಡಿದರೂ ಅವರು ವಿಚಾರಣೆಗೆ ಹಾಜರಾಗಲಿಲ್ಲ. ಇದು ಕೇಜ್ರಿವಾಲ್‌ ಅವರು ಪ್ರಕರಣದಲ್ಲಿ ಭಾಗಿಯಾಗಿರುವುದರ ಸ್ಪಷ್ಟ ಚಿತ್ರಣವನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.

‘ನೀವು ಪ್ರಾಮಾಣಿಕರಾಗಿದ್ದರೆ ವಿಚಾರಣೆಗೆ ಸಹಕರಿಸಲು ನಿಮಗೆ ಏನು ತೊಂದರೆ, ಪ್ರಶ್ನೆಗಳಿಗೆ ಏಕೆ ಉತ್ತರಿಸುತ್ತಿಲ್ಲ, ತನಿಖೆಯಿಂದ ಏಕೆ ಓಡಿ ಹೋಗುತ್ತಿದ್ದೀರಿ’ ಎಂದು ಅಗರವಾಲ್‌ ಪ್ರಶ್ನಿಸಿದ್ದಾರೆ.

ಅವರು ಭ್ರಷ್ಟಾಚಾರ ಮಾಡಿರುವುದು ಅವರಿಗೆ ತಿಳಿದಿತ್ತು. ಆದ್ದರಿಂದಲೇ ಪ್ರಶ್ನೆಗಳಿಗೆ ಉತ್ತರಿಸುತ್ತಿಲ್ಲ. ಭ್ರಷ್ಟಾಚಾರದ ವಿರುದ್ಧದ ಹೋರಾಟದಲ್ಲಿ ಪ್ರಾರಂಭವಾದ ಪಕ್ಷ ಇಂದು ದೇಶದ ಅತಿದೊಡ್ಡ ಭ್ರಷ್ಟ ಪಕ್ಷವಾಗಿ ಹೊರಹೊಮ್ಮಿದೆ ಎಂಬುದು ಖಚಿತ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.