ADVERTISEMENT

ಭಯಗ್ರಸ್ತರು ಪಕ್ಷ ಬಿಡಲಿ, ಧೈರ್ಯಶಾಲಿಗಳು ಪಕ್ಷ ಸೇರಲಿ: ರಾಹುಲ್‌ ಗಾಂಧಿ

ಪಿಟಿಐ
Published 16 ಜುಲೈ 2021, 12:57 IST
Last Updated 16 ಜುಲೈ 2021, 12:57 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ    

ನವದೆಹಲಿ: ‘ವಾಸ್ತವ ಮತ್ತು ಬಿಜೆಪಿಯನ್ನು ಎದುರಿಸಲು ಹೆದರುವವರು ಪಕ್ಷವನ್ನು ತೊರೆಯಬಹುದು. ಆದರೆ ಕಾಂಗ್ರೆಸ್ ಹೊರಗಿನ ನಿರ್ಭೀತ ನಾಯಕರನ್ನು ಪಕ್ಷದೊಳಗೆ ಕರೆತರಬೇಕು,’ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಶುಕ್ರವಾರ ಹೇಳಿದ್ದಾರೆ.

ಆನ್‌ಲೈನ್ ಕಾರ್ಯಕ್ರಮವೊಂದರಲ್ಲಿ ಪಕ್ಷದ ಸೋಷಿಯಲ್ ಮೀಡಿಯಾ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಭಯಪಟ್ಟವರೆಲ್ಲ ಪಕ್ಷ ತೊರೆದಿದ್ದಾರೆ,‘ ಎಂದು ಹೇಳಿದರು. ಇದಕ್ಕೆ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ ಅವರ ಉದಾಹರಣೆಯನ್ನು ನೀಡಿದರು.

‘ಹೆದರಿಕೆ ಇಲ್ಲದ ಅನೇಕರಿದ್ದಾರೆ. ಆದರೆ ಅವರು ಕಾಂಗ್ರೆಸ್ ಹೊರಗೆ ಇದ್ದಾರೆ. ಇವರೆಲ್ಲ ನಮ್ಮವರಾಗಬೇಕು. ಅವರನ್ನು ಒಳಗೆ ಕರೆತನ್ನಿ. ನಮ್ಮ ಪಕ್ಷದೊಳಗೆ ಭಯಭೀತರಾಗಿರುವವರನ್ನು ಹೊರಹಾಕಬೇಕು’ ಎಂದು ಅವರು ಸಾಮಾಜಿಕ ಮಾಧ್ಯಮ ಕಾರ್ಯಕರ್ತರಿಗೆ ತಿಳಿಸಿದರು.

ADVERTISEMENT

'ಅವರು ಆರೆಸ್ಸೆಸ್‌ ನವರು. ಅವರೆಲ್ಲ ಹೊರಹೋಗಬೇಕು. ಅವರು ಆನಂದಿಸಲಿ. ನಮಗೆ ಅವರು ಬೇಡ. ಅವರು ಅಗತ್ಯವಿಲ್ಲ. ನಮಗೆ ನಿರ್ಭೀತ ಜನರು ಬೇಕು. ಇದು ನಮ್ಮ ಸಿದ್ಧಾಂತ. ಇದು ನಿಮಗೆ ನನ್ನ ಮೂಲ ಸಂದೇಶ‘ ಎಂದು ರಾಹುಲ್‌ ಹೇಳಿದರು.

ತಮ್ಮ ಮಾತುಗಳೆಲ್ಲದ್ದಕ್ಕೂ ರಾಹುಲ್‌ ಗಾಂಧಿ ಅವರು ಜ್ಯೋತಿರಾದಿತ್ಯ ಸಿಂಧಿಯಾ ಅವರ ಉದಾಹರಣೆ ನೀಡಿದರು ಎಂದು ಮೂಲಗಳು ತಿಳಿಸಿವೆ. ‘ಅವರು ತಮ್ಮ ಮನೆಯನ್ನು ಉಳಿಸಿಕೊಳ್ಳಬೇಕಾಗಿತ್ತು. ಅವರು ಭಯಪಟ್ಟಿದ್ದರು, ಆರ್‌ಎಸ್ಸೆಸ್ಸೆಗೆ ಸೇರಿಕೊಂಡರು,‘ ಎಂದು ಗೇಲಿ ಮಾಡಿದ್ದಾರೆ.

ಕಾಂಗ್ರೆಸ್‌ನ ಹಲವು ಹಿರಿಯ ನಾಯಕರು ಇತ್ತೀಚಿನ ದಿನಗಳಲ್ಲಿ ಬಿಜೆಪಿಗೆ ಸೇರಲೆಂದೇ ಕಾಂಗ್ರೆಸ್‌ ತೊರೆದಿದ್ದಾರೆ. ಇದರಲ್ಲಿ ಸಿಂಧಿಯಾ ಮತ್ತು ಜಿತಿನ್ ಪ್ರಸಾದ್‌ ಪ್ರಮುಖರು. ನಟಿ ಖುಷ್ಬೂ ಸುಂದರ್ ಅವರಲ್ಲದೆ ಮಹಾರಾಷ್ಟ್ರ ಕಾಂಗ್ರೆಸ್ ಮುಖಂಡರಾದ ನಾರಾಯಣ್ ರಾಣೆ ಮತ್ತು ರಾಧಾಕೃಷ್ಣ ವೈಖೆ ಪಾಟೀಲ್ ಕೂಡ 2019 ರಲ್ಲಿ ಕಾಂಗ್ರೆಸ್‌ ತ್ಯಜಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.