ADVERTISEMENT

ತ್ರಿಪುರಾದಲ್ಲಿ ಮೂವರು ಬಾಂಗ್ಲಾ ಮಹಿಳೆಯರ ಬಂಧನ

ಪಿಟಿಐ
Published 11 ಫೆಬ್ರುವರಿ 2024, 13:23 IST
Last Updated 11 ಫೆಬ್ರುವರಿ 2024, 13:23 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಅಗರ್ತಲಾ: ಸೂಕ್ತ ದಾಖಲೆಗಳಿಲ್ಲದೆ ಕೋಲ್ಕತ್ತಾಗೆ ತೆರಳುವ ರೈಲು ಹತ್ತಲು ಯತ್ನಿಸಿದ ಮೂವರು ಬಾಂಗ್ಲಾದೇಶದ ಮಹಿಳೆಯರು ಹಾಗೂ ಮೂವರು ಸ್ಥಳೀಯರನ್ನು ಭಾನುವಾರ ಅಗರ್ತಲಾ ರೈಲು ನಿಲ್ದಾಣದಿಂದ ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ವೇಳೆ ಬಾಂಗ್ಲಾ ಮಹಿಳೆಯರ ಬಳಿ ಪಾಸ್‌ಪೋರ್ಟ್‌ ಇರಲಿಲ್ಲ ಎಂದು ಅಗರ್ತಲಾ ಜಿಆರ್‌ಪಿ ಪೊಲೀಸ್ ಠಾಣೆಯ ಅಧಿಕಾರಿ ಒಬೈದುರ್ ರಹಮಾನ್ ಹೇಳಿದ್ದಾರೆ.

ADVERTISEMENT

ಬಾಂಗ್ಲಾದೇಶದ ಮಹಿಳೆಯರನ್ನು ಭಾರತೀಯ ಪಾಸ್‌ಪೋರ್ಟ್ ಕಾಯ್ದೆಯಡಿ ಬಂಧಿಸಲಾಗಿದೆ. ಜೊತೆಗೆ ತ್ರಿಪುರಾದ ಸೆಪಹಿಜಾಲಾ ಜಿಲ್ಲೆಯ ಇಬ್ಬರು ಪುರುಷರು ಮತ್ತು ಒಬ್ಬ ಮಹಿಳೆ ಸೇರಿದಂತೆ ಮೂವರನ್ನು ಮಾನವ ಕಳ್ಳಸಾಗಣೆ ಆರೋಪದ ಮೇಲೆ ಬಂಧಿಸಲಾಗಿದೆ ಎಂದು ರೆಹಮಾನ್ ತಿಳಿಸಿದ್ದಾರೆ.

ಢಾಕಾದಿಂದ ಬಂದ ಈ ಮೂವರು ಬಾಂಗ್ಲಾ ಮಹಿಳೆಯರು ಕೋಲ್ಕತ್ತಾಗೆ ಪ್ರಯಾಣಿಸುವ ಉದ್ದೇಶ ಹೊಂದಿದ್ದರು ಎಂದು ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.